ದೊಡ್ಡಬಳ್ಳಾಪುರ : ಅವಧಿ ಮೀರಿದ 25 ಲಕ್ಷ ಮೌಲ್ಯದ 11476 ಲೀಟರ್ ಮದ್ಯವನ್ನ ಅಬಕಾರಿ ಅಧಿಕಾರಿಗಳು ನಾಶ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಬಳಿಯಲ್ಲಿರುವ ಕರ್ನಾಟಕ ಪಾನೀಯ ನಿಗಮದ ದೊಡ್ಡಬಳ್ಳಾಪುರ ಡಿಪೋದಲ್ಲಿ ಅವಧಿ ಮೀರಿದ ಮದ್ಯವನ್ನ ನಾಶ ಮಾಡಲಾಯಿತು, 1116 ಬಾಕ್ಸ್ ಗಳಲ್ಲಿದ್ದ ಬೀರ್ ಮತ್ತು ವಿವಿಧ ಮದ್ಯದ ಬಾಟಲ್ ಗಳನ್ನ ನಾಶ ಮಾಡಲಾಯಿತು,
25 ಲಕ್ಷ ಮೌಲ್ಯದ ಒಟ್ಟು 11476 ಲೀಟರ್ ಅವಧಿ ಮೀರಿದ ಮದ್ಯವನ್ನ ಚರಂಡಿಗೆ ಸುರಿಯುವ ಮೂಲಕ ನಾಶ ಮಾಡಲಾಯಿತು, ಡಿಸಿ ಆದೇಶದ ಮೇರೆಗೆ ಅಬಕಾರಿ ಉಪ ಅಧಿಕ್ಷಕ ಗಿರೀಶ್ ವಿ ನೇತೃತ್ವದಲ್ಲಿ ಮದ್ಯ ನಾಶ ಮಾಡಲಾಯಿತು.
Kshetra Samachara
31/12/2021 12:00 pm