ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಕಳೆದ 6 ತಿಂಗಳಿನಿಂದ ಮೊಬೈಲ್ ನಿಶ್ಯಬ್ದಗೊಂಡಿದೆ. ಮತ್ತೊಂದು ಕಡೆ ತಳಮಟ್ಟದ ಮಾಹಿತಿ ಸಿಗದೇ ಪರದಾಡುತ್ತಿದೆ ಸರ್ಕಾರ.
ಹೌದು, ರಾಜ್ಯದ 60 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಬಂದ್ ಆಗಿದ್ದು, ಕರೆನ್ಸಿ ಇಲ್ಲದೆ ಬಳಕೆಯಾಗುತ್ತಿಲ್ಲ. ಸರ್ಕಾರಿ ಮೊಬೈಲ್ ಗಳು, ಅದರಲ್ಲೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಕೊಡುವ ಗೌರವ ವೇತನದಲ್ಲಿ 11,500 ರೂ. ಇದೀಗ ಮತ್ತೊಂದು ಹೊರೆ ವಂತಾಗಿದೆ.
ಪ್ರತಿಯೊಂದು ಸರ್ಕಾರಿ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಬೇಕು. ಆದ್ರೆ ಇದಕ್ಕಾಗಿ ಕಳೆದ ವರುಷ ಕೇಂದ್ರ ಸರ್ಕಾರ ಸ್ಮಾರ್ಟ್ ಫೋನ್ ನೀಡಿತ್ತು. ಮಕ್ಕಳ ಪೋಷಣ ಅಭಿಯಾನ ಜಾರಿಗಾಗಿ ಸ್ಮಾರ್ಟ್ ಫೋನ್ ನ ಅಂಗನವಾಡಿ ಕಾರ್ಯಕರ್ತರಯರಿಗೆ ನೀಡಲಾಗಿತ್ತು ಮೊಬೈಲ್ ಪೋನ್ ಜೊತೆಗೆ ಪ್ರತಿ ಅವ ಎರಡು ಜಿಬಿ, ಅನ್ ಲಿಮಿಟೆಡ್ ಕಾಲ್ ಸೌಲಭ್ಯ ಹಾಗೂ ರೀಚಾರ್ಜ್ ಗೂ ಕೇಂದ್ರ ಸರಕಾರದ ಅನುದಾನ ಬಳಕೆಯಾಗುತ್ತಿತ್ತು.ಆದರೀಗ ಕಳೆದ 6 ತಿಂಗಳಿನಿಂದ ಅನುದಾನ ಸ್ಥಗಿತಗೊಂಡಿದೆ.
Kshetra Samachara
25/07/2022 05:01 pm