ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೈ ರಿಸ್ಕ್ ತೆಗೆದುಕೊಳ್ತಿದೇಯಾ ಬಿಎಂಟಿಸಿ...?

ಜನವರಿ ಕೊನೆಯ ವಾರ ಹಾಗೂ ಫೆಬ್ರವರಿ ಮೊದಲ ವಾರದಲ್ಲಿ ಚಲಿಸುತ್ತಿದ್ದ ಮೂರು ಮಿಡಿ ಬಿಎಂಟಿಸಿ ಬಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ಈ ರೀತಿಯ ಪ್ರಕರಣಗಳು ಮರುಕಳಿಸಿದ ಪರಿಣಾಮ ಬಿಎಂಟಿಸಿ ಮಿಡಿ ಬಸ್ ಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ ಇದೀಗ ಮತ್ತೆ ಇಂತಹ ಬಸ್ ಗಳನ್ನು ರಸ್ತೆಗೆ ಇಳಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.

ಬಿಎಂಟಿಸಿ 2014ರಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿಯಿಂದ ಒಟ್ಟು 186 ಮಿಡಿ ಬಸ್ ಗಳ ಬಿಡಿ ಭಾಗಗಳ ಸಮಸ್ಯೆ ಕಂಡು ಬಂದಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿ ನಿರ್ವಹಣೆ ಮಾಡಿಕೊಡಬೇಕಿತ್ತು. ಹೀಗಾಗಿ ಕಳೆದ ಫೆಬ್ರವರಿ ಯಲ್ಲಿ ತಾತ್ಕಾಲಿಕವಾಗಿ ಮಿಡಿ ಬಸ್ ಗಳ ಸಂಚಾರವನ್ನು ಬಿಎಂಟಿಸಿ ರದ್ದುಗೊಳಿಸಿತ್ತು.

ಅದರೆ ಮಿಡಿ ಬಸ್ ಗಳನ್ನು ರಸ್ತೆಗೆ ಇಳಿಸದೆ ಇರೋದ್ರಿಂದ ಆರ್ಥಿಕ ನಷ್ಟ ಉಂಟಾಗುತ್ತಿದೆಯಂತೆ. ನಿತ್ಯ 9 ಲಕ್ಷ ರೂ. ಆದಾಯ ಕುಂಠಿತವಾಗುತ್ತಿದೆ ಎಂಬುದು ಬಿಎಂಟಿಸಿ ಅಧಿಕಾರಿಗಳ ವಾದ.

ಹೀಗಾಗಿ ದುರಸ್ಥಿ ಆಗದೆ ಸಂಚಾರ ನಿಲ್ಲಿಸಿದ್ದ 178 ಮಿಡಿ ಬಸ್ ಗಳನ್ನು ಶೀಘ್ರದಲ್ಲೇ ಮತ್ತೆ ರಸ್ತೆಗಿಳಿಸುವ ಪ್ಲಾನ್ ಬಿಎಂಟಿಸಿ ಮಾಡಿಕೊಳ್ತಿದೆ. ಈಗಾಗಲೇ 5 ಮಿಡಿ ಬಸ್ ಗಳು ದುರಸ್ಥಿಯಾಗಿ ರಸ್ತೆಗಿಳಿದಿದ್ದು, ನಿತ್ಯ ಬಸ್ ಆಪರೇಟ್ ಮಾಡಿಕೊಳ್ಳ ಲಾಗುತ್ತಿದೆ.

ಗಣೇಶ್ ಹೆಗಡೆ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By :
PublicNext

PublicNext

20/07/2022 12:29 pm

Cinque Terre

22.99 K

Cinque Terre

0

ಸಂಬಂಧಿತ ಸುದ್ದಿ