ಕೆಜಿಎಫ್ ಅಲಿಯಾಸ್ ಉಮ್ರ ಬಾಬು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಸಂತನಗರ ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮನೆ ತಲಾಶ್ ಮಾಡ್ತಿದ್ದಾರೆ.
ತೆರಿಗೆ ವಂಚನೆ ಆರೋಪ ಹಿನ್ನೆಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿರುವ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಬಾಬು ಮನೆಗೆ ಅಧಿಕಾರಿಗಳು ಹಾಜರಾಗಿ ಉಮ್ರ ಬಾಬು ಶಾಕ್ ನೀಡಿದರು. ಐಟಿ ಅಧಿಕಾರಿಗಳು ಪೊಲೀಸ್ ಹಾಗೂ ಸಿಆರ್‌ಪಿಎಫ್ ಭದ್ರತಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಕೆಜಿಎಫ್ ಬಾಬು ಮನೆ ಜೊತೆಗೆ ಬಾಬು ಸಂಬಂಧಿಸಿದ ಕಚೇರಿ ಮೇಲೂ ದಾಳಿ ನಡೆಸಿ, ಬಾಬು ವ್ಯವಹಾರ ಸಂಬಂಧಿಸಿದಂತೆ ಆದಾಯದ ಮೂಲವನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
PublicNext
28/05/2022 11:32 am