ಬೆಂಗಳೂರು; ಪೊಲೀಸ್ ಅಂದ್ರೆ ಭಯ ಅಲ್ಲ, ಭರವಸೆ ಅನ್ನೋದು ಪೊಲೀಸ್ ಇಲಾಖೆಯ ಧ್ಯೇಯ ವಾಕ್ಯ. ಆದ್ರೆ ಇಲ್ಲಿ ಈ ನಡೆದ ಘಟನೆ ನೋಡಿದ್ರೆ ಪೊಲೀಸ್ ಇಲಾಖೆ ಅಂದ್ರೆ ಜನ್ರಿಗೆ ಬೇಸರು ತರಿಸುತ್ತೆ.
ಹೌದು ಪಾನಮತ್ತನಾಗಿ ವಾಹನವೊಂದಕ್ಕೆ ಅಪಘಾತ ಮಾಡಿದ ಪೊಲೀಸಪ್ಪ ಕನಿಷ್ಟ ಮಾನವೀಯತೆಗೂ ಸ್ಥಳದಲ್ಲಿ ಏನಾಯ್ತು ಅಂತ ವಿಚಾರಿಸದೇ ಅಲ್ಲಿಂದ ಕಾಲ್ಕಿತ್ತ ಘಟನೆ ಬೆಂ. ಉತ್ತರ ತಾಲೂಕು ಮಾದನಾಯಕನಹಳ್ಳಿ ರಾ.ಹೆದ್ದಾರಿ, ಬೆಂಗಳೂರು ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ರಾಜಗೋಪಾಲನಗರ ಪೊಲೀಸ್ ಠಾಣಾ ಪಿಎಸ್‌ಐ ಸಂಜೀವಯ್ಯ ಪಾನಮತ್ತನಾಗಿ ತಮ್ಮ ಖಾಸಗಿ ಜೀಪ್ ಚಾಲನೆ ಮಾಡಿ ಅಪಘಾತ ಮಾಡಿರುವ ಪೊಲೀಸಪ್ಪ.ಅಪಘಾತದ ವೇಳೆ ಕನಿಷ್ಟ ಮಾನವೀಯತೆಗೂ ಅಪಘಾತದಲ್ಲಿ ಜಖಂಗೊಂಡಿದ್ದ ಇತರೆ ವಾಹನಗಳ ಬಗ್ಗೆ ತಲೆಕಡಿಸಿಕೊಳ್ಳದೇಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಹಾಸನ ಮೂಲದ ಇನ್ನೋವಾ ಕಾರಿನಲ್ಲಿ ಮಿಥುನ್ ಮತ್ತವರ ಕುಟುಂಬಸ್ಥರು ಮಾಕಳಿ ಬಳಿಯ ಖಾಸಗಿ ರೆಸಾರ್ಟ್ ಒಂದ್ರಲ್ಲಿ ವಿವಾಹ ಕಾರ್ಯಕ್ರಮ ಮುಗಿಸಿ ಮತ್ತೆ ಹಾಸನಕ್ಕೆ ವಾಪಸ್ ತೆರಳುವ ವೇಳೆ ಈ ಅಪಘಾತ ಘಟಿಸಿದೆ. ಇನ್ನೋವಾ ಕಾರಿನಲ್ಲಿದ ಓರ್ವ ಮಹಿಳೆ ಮತ್ತು ಮೂವರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಇದೇ ಓರ್ವ ಜನಸಾಮಾನ್ಯನಿಂದ ಪೊಲೀಸ್ ಅಧಿಕಾರಿ ವಾಹನಕ್ಕೆ ಸಂಭವಿದ್ರೆ, ಬಿಟ್ಟು ಬಿಡ್ತಿದ್ರಾ. ಅಲ್ಲದೇ ಅಪಘಾತದ ವೇಳೆ ಎಸ್‌ಐ ಸಂಜೀವಯ್ಯ ಪಾನಮತ್ತನಾಗಿ ಇಂತಹ ಕೆಲಸ ಮಾಡೋದು ಸರಿಯಾ, ನಮಗೆ ನ್ಯಾಯಬೇಕು ಅಂತ ದೂರು ದಾಖಲಿಸಲು ಸಂಚಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಕೇಸ್ ದಾಖಲಾಗದಂತೆ ರಾಜಿ,ಸಂಧಾನದ ಮಾತು ಕೇಳಿ ಬರುತ್ತಿದೆ.
PublicNext
21/03/2022 09:08 pm