ಬೆಂಗಳೂರು: ಲಾಲ್ ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ಲಾಲ್ ಬಾಗ್‌ನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂದು ಬೆಳಗ್ಗೆ ಸಚಿವ ಮುನಿರತ್ನ ಲಾಲ್‌ಬಾಗ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ಮತ್ತು ಡಾಕ್ಟರ್ ರಾಜಕುಮಾರ್ ಅವರಿಗೆ ಈ ಬಾರಿಯ ಪುಷ್ಪ ಪ್ರದರ್ಶನ ಸಮರ್ಪಣೆ ಮಾಡಲಾಗುತ್ತಿದೆ.
ಎರಡು ವರ್ಷಗಳ ನಂತರ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು ಇದು 212ನೇ ಫಲ ಪುಷ್ಪ ಪ್ರದರ್ಶನ ಆಗಿದ್ದು ಈ ಬಾರಿ ಲಕ್ಷಾಂತರ ಮಂದಿ ಭೇಟಿ ನೀಡುವ ಸಾಧ್ಯತೆಗಳಿವೆ. ವಿಶೇಷವಾಗಿ ಡಾಕ್ಟರ್ ರಾಜಕುಮಾರ್ ಅವರು ಹುಟ್ಟಿ ಬೆಳೆದ ಮನೆ ಹೂವಿನಿಂದ ನಿರ್ಮಾಣ ಮಾಡಲಾಗುತ್ತಿದೆ ಮತ್ತು ತಾತ್ಕಾಲಿಕವಾಗಿ ಗ್ಲಾಸ್ ಹೌಸ್‌ನಲ್ಲಿ ಡಾ. ಪುನೀತ್ ರಾಜಕುಮಾರ್ ಅವರ 35 ಅಡಿಗಳ ಚಿನ್ನ ಲೇಪಿತ ಪ್ರತಿಮೆಯನ್ನು ಇಡಲಾಗಿದೆ.
ಆಗಸ್ಟ್ 5ರಂದು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಕಾರ್ಯಕ್ರಮ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ದೊಡ್ಡಮನೆಯ ಸದಸ್ಯರಾದ ಶಿವರಾಜ್‌ಕುಮಾರ್ ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಭಾಗಿಯಾಗಲಿದ್ದಾರೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸಮಾಧಿ ಇಂದ ಆಗಸ್ಟ್ 5ರ ಬೆಳಗ್ಗೆ ಮನೆಯವರಿಂದ ಪೂಜೆ ಮಾಡಿ ಸಮಾಧಿಯಿಂದ ಜ್ಯೋತಿ ದೀಪವನ್ನು ತೆಗೆದುಕೊಂಡು ಬಂದು ಲಾಲ್ಬಾಗ್ ಫ್ಲವರ್ ಶೋ ನಲ್ಲಿ ಇಡಲಾಗುವುದು.
ಫ್ಲವರ್ ಷೋಗೆ ಬರುವ ಪ್ರವಾಸಿಗಳಿಗೆ ಈ ಬಾರಿ ಟಿಕೆಟ್ ದರ ಕೂಡ 70 ರೂ. ಗೆ ಇಳಿಕೆ ಮಾಡಲಾಗಿದೆ Rs.70 ಮಾಡಲಾಗಿದೆ. ಮತ್ತು ಫ್ಲವರ್ ಶೋಗೆ ಬರುವ ಪ್ರವಾಸಿಗರಿಗೆ ಲಾಲ್‌ಬಾಗ್ ನಾಲ್ಕು ದಿಕ್ಕಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಇನ್ನೇನು ಎರಡು ದಿನಗಳು ಬಾಕಿ ಇದ್ದು ಜನರು ಫಲಪುಷ್ಪ ಪ್ರದರ್ಶನ ನೋಡಲು ಕಾತರರಾಗಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
03/08/2022 08:22 pm