ಬೆಂಗಳೂರು: ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಾದ ಚಿಕ್ಕಪೇಟೆ ಬಳೆಪೇಟೆ,ಅವೆನ್ಯೂ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಅತ್ಯಂತ ವಿಜ್ರಂಭಣೆಯಿಂದ ನೆರವೇರಿತು.. ಚಿಕ್ಕಪೇಟೆ ಯ ಮಾಜಿ ಕಾರ್ಪೋರೇಟರುಗಳಾದ ಶಿವಕುಮಾರ್ ಹಾಗೂ ಲೀಲಾ ಶಿವಕುಮಾರ್ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಬೃಹತ್ ಮೆರವಣಿಗೆ ಗೋಪೂಜೆಯೊಂದಿಗೆ ಆರಂಭ ಗೊಂಡಿತು..
ಬೇಲಿಮಠದ ಶಿವರುದ್ರ ಮಹಾಸ್ವಾಮಿಗಳು ಸಮಾಜಸೇವಕ ಮಹೇಂದ್ರ ಮುನ್ನೋತ್ ಪಾಲ್ಗೊಂಡಿದ್ದರು.. ಜ್ಯೂನಿಯರ್ ಮೋದಿ ಸದಾನಂದ ನಾಯಕ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು..
ಸುಮಾರು 80 ಕ್ಕೂ ಅಧಿಕ ಗಣೇಶ ವಿಗ್ರಹಗಳ ಸಾಮೂಹಿಕ ಮೆರವಣಿಗೆ ಅನೇಕ ವಾದ್ಯವೃಂದಗಳ ಸಮ್ಮುಖದಲ್ಲಿ ಜಾನಪದ ನೃತ್ಯತಂಡಗಳ ಪಾಲ್ಗೊಳ್ಳುವಿಕೆಯೊಂದಿಗೆ ಸಹಸ್ರಾರು ಜನಗಳ ಪಾಲ್ಗೊಳ್ಳುವಿಕೆ ಯೊಂದಿಗೆ ನೆರವೇರಿತು..
ನಂತರ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ. ಅಲಸೂರುಕೆರೆ, ಸ್ಯಾಂಕಿಕೆರೆ, ಯಡಿಯೂರುಕೆರೆ ಗಳಲ್ಲಿ ನೆರವೇರಿತು...
ಪ್ರವೀಣ್ ರಾವ್
PublicNext
05/09/2022 08:44 pm