ಬೆಂಗಳೂರು- ಸ್ಯಾಂಡಲ್ವುಡ್ನ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅಗಲಿ 5 ತಿಂಗಳುಗಳು ಕಳೆದಿದೆ. ಇತ್ತೀಚೆಗೆ ಅವರ ಅಗಲಿಕೆಯ ನಡುವೆಯೂ ಹುಟ್ಟು ಹಬ್ಬವನ್ನು ಆಚರಿಸಲಾಗಿತ್ತು.
ಅನೇಕರು ನೆಚ್ಚಿನ ನಟ ಈ ಬಾರಿ ಹುಟ್ಟುಹಬ್ಬಕ್ಕೆ ಇಲ್ಲವೆಂದು ಕಣ್ಣೀರು ಸುರಿಸಿದ್ದಾರೆ. ಪುನೀತ್ ಅವರು ಅಮರರಾದ ದಿನದಿಂದ ಇಂದಿನವರೆಗೆ ಅವರ ಏನಾದರೂ ಫೋಟೋ ವಿಡಿಯೋ ವೈರಲ್ ಆಗುತ್ತಿರುತ್ತದೆ. ಅಷ್ಟೇ ಏಕೆ ಅಭಿಮಾನಿಗಳು ಅವರನ್ನು ಸ್ಮರಿಸಲು ಏನಾದರೂ ಕಾರ್ಯವನ್ನು ಮಾಡುತ್ತಿರುತ್ತಾರೆ. ಅದರಂತೆ ಇದೀಗ ಕನ್ನಡಿಗರ ಪ್ರೀತಿಯ ಅಪ್ಪುಮತ್ತು ಗಣೇಶನ ಮಣ್ಣಿನ ಮೂರ್ತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಭಾರತೀಯರು ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ವಿನಾಯಕ ಹಬ್ಬಕ್ಕೆ ಇನ್ನೂ ಐದು ತಿಂಗಳು ಬಾಕಿ ಇದೆ. ಆದರೆ ಅಭಿಮಾನಿಗಳು ಈಗಲೇ ಅಪ್ಪು ಮತ್ತು ಗಣೇಶನ ಮಣ್ಣಿನ ವಿಗ್ರಹವನ್ನು ರಚಿಸುವ ಮೂಲಕ. ಅಪ್ಪುವನ್ನು ನೆನಪಿಸಿಕೊಂಡಿದ್ದಾರೆ.
ಅಂದಹಾಗೆಯೇ ವೈರಲ್ ಆದ ಫೋಟೋದಲ್ಲಿ ಗಣೇಶನು ಪುನೀತ್ ರಾಜ್ ಕುಮಾರ್ ಅವರ ಗಲ್ಲವನ್ನು ಹಿಡಿದುಕೊಂಡಿದ್ದಾರೆ. ನಗುಮೊಗದ ಪುನೀತ್ ರಾಜ್ ಕುಮಾರ್ ಅವರ ಭುಜದ ಮೇಲೆ ಮೂಷಿಕವಿದೆ. ಈ ಮುದ್ದಾಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಪ್ಪು ಗಣೇಶದ ಈ ಮುದ್ದಾದ ಮಣ್ಣಿನ ಮೂರ್ತಿ ಈ ಬಾರಿಯ ಗಣೇಶ ಹಬ್ಬದ ಸ್ಪೆಷಲ್ ಎಂದೇ ಹೇಳಬಹುದಾಗಿದೆ. ಈ ಬಾರಿಯ ಗಣೇಶ ಹಬ್ಬದಂದು ಅಪ್ಪುವಿನ ಮತ್ತು ವಿನಾಯಕನ ಮೂರ್ತಿ ಎಲ್ಲೆಂದರಲ್ಲಿ ಕಾಣಸಿಗಲಿದೆ. ಅಭಿಮಾನಿಗಳು ಅವರನ್ನು ಮತ್ತೆ ಮತ್ತೆ ಸ್ಮರಿಸಲಿದ್ದಾರೆ
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದನ್ನು ಯಾರು ನಿರ್ಮಿಸಿರುವುದು ಮತ್ತು ಎಲ್ಲಿ ವಿಗ್ರಹ ತಯಾರಿಸಿರುವುದು ಎಂದು ತಿಳಿದುಬಂದಿಲ್ಲ. ಸದ್ಯ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಅಪ್ಪು ಮತ್ತು ಗಣೇಶನ ಮಣ್ಣಿನ ವಿಗ್ರಹದ ಫೋಟೋ ವೈರಲ್ ಆಗುತ್ತಿದೆ.
PublicNext
22/07/2022 08:37 pm