ನೆಲಮಂಗಲ: ನಟ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಹಿನ್ನೆಲೆ ನೆಲಮಂಗಲ ತಾಲೂಕು ಚಿಕ್ಕಮಾರನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ನಟ ವಿನೋದ್ ರಾಜ್, ಉದ್ಘಾಟನೆ ಕಾರ್ಯಕ್ರಮ ಬಳಿಕ ನಾಡ ಧ್ವಜ ಹಾರಿಸಿದರು. ನಟ ವಿನೋದ್ ರಾಜ್ ಮತ್ತು ಗ್ರಾಮದ ಮುಖ್ಯಸ್ಥರು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಅಪ್ಪುವನ್ನ ನೆನೆದು ಭಾವಪರವಶರಾದ ನಟ ವಿನೋದ್ ರಾಜ್, ಅಪ್ಪು ಮನಸ್ಸು ಕಲ್ಮಶವಿಲ್ಲದ ನೀರಿನಂತಹ ಮನಸ್ಸು. ಪ್ರೀತಿಗೆ ಇನ್ನೊಂದು ಹೆಸ್ರೆ ಅಪ್ಪು, ಅಪ್ಪು ಪ್ರೀತಿನಾ ಕಳೆದ್ಕೊಂಡು ಅನಾಥರಾಗಿ ಬಿಟ್ಟಿದ್ದೇವೆ. ಅಪ್ಪು ನಿಧನದ ಬಳಿಕ ನನ್ನ ತಾಯಿ ಆರೋಗ್ಯವಾಗಿದ್ದೋರು ದಿನೇ ದಿನೇ ಆರೋಗ್ಯ ಕಳ್ಕೊಂಡ್ರು. ಬಾಳಿ ಇನ್ನೇನು ಮಾಡ್ಕೊಳ್ಬೇಕು ಅನ್ನೋ ಮಾತಾಡ್ತಿದ್ದಾರೆ.
ಶಿವಣ್ಣ, ರಾಘಣ್ಣ ಮತ್ತು ಕುಟುಂಬದವರಿಗೆ ನೋವು ತಡ್ಕೊಳ್ಳೋ ಶಕ್ತಿ ಕೊಡ್ಲಿ ಆ ದೇವರು,ಅಪ್ಪು ಅಭಿಮಾನಿಗಳಿಗಿರೋ ಪ್ರೀತಿ ನೋಡಿದಾಗ, ಆ ಪ್ರೀತಿಗಿಂತ ನೋವೇ ಜಾಸ್ತಿ ಆಗುತ್ತೆ ಎಂದು ನಟ ವಿನೊದ್ ರಾಜ್ ಕಣ್ಣೀರಿಟ್ಟದ್ದಾರೆ. ಬಳಿಕ ಪುನೀತ್ ಗಾಗಿಯೇ ಗಾನ ನಮನ ಸಲ್ಲಿಸಿದ್ರು.
PublicNext
17/03/2022 06:41 pm