ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಮೆಡ್-ಕೆ ರದ್ದು ಮಾಡಲು ಮುಂದಾದ ರಾಜ್ಯಸರ್ಕಾರ

ಬೆಂಗಳೂರು: ಮುಂದಿನ ವರ್ಷದಿಂದ ಕಾಮೆಡ್-ಕೆ ರದ್ದುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಉನ್ನತ ಶಿಕ್ಷಣ ಸಚಿವರ ಹೇಳಿಕೆಗೆ ಕಾಮೆಡ್ -ಕೆ ವಿರೋಧ ವ್ಯಕ್ತಪಡಿಸಿದೆ. ಸಚಿವರ ಏಕಪಕ್ಷೀಯ ನಿರ್ಧಾರಕ್ಕೆ ಕಾಮೆಡ್-ಕೆ ಕಾರ್ಯದರ್ಶಿ ಎಸ್.ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಗೆ ಮಾಹಿತಿ ನೀಡದೇ ಹೇಗೆ ಕಾಮೆಡ್-ಕೆ ವಿಲೀನ ಮಾಡ್ತೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಕುರಿತು ನಮ್ಮೊಂದಿಗೆ ಯಾವುದೇ ಸಭೆ ನಡೆಸಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ಮಾಡಲಿ. ಇಲ್ಲವಾದಲ್ಲಿ ನಾವು ಕೋರ್ಟ್ ಮೊರೆ ಹೋಗ್ತೀವಿ ಎಂದು ಕಾಮೆಡ್-ಕೆ ನಿರ್ದೇಶಕ ಹೇಳ್ತಿದ್ದಾರೆ.

ಕಾಮೆಡ್-ಕೆ ವಿಲೀನ ಮಾಡೋದು ಸರಿ ಅಲ್ಲ. ಕಳೆದ 18 ವರ್ಷಗಳಿಂದ ದೇಶದಲ್ಲಿ ಕಾಮೆಡ್-ಕೆ ಇದೆ. ಪ್ರತಿ ವರ್ಷ 70 ಸಾವಿರ ಅಭ್ಯರ್ಥಿಗಳು ಕಾಮೆಡ್-ಕೆ ಪರೀಕ್ಷೆಗೆ ನೊಂದಣಿ ಮಾಡಿಕೊಳ್ತಾರೆ. 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಸೀಟ್‌ನ ಅಡಿ ಇಂಜಿನಿಯರಿಂಗ್ ಕೋರ್ಸ್ ಪ್ರವೇಶ ಪಡೆಯುತ್ತಾರೆ. ಏಕಾಏಕಿ ಕಾಮೆಡ್-ಕೆ ವಿಲೀನ ಅನ್ನೋದು ಎಷ್ಟು ಸರಿ? ಶೀಘ್ರವೇ ಸರ್ಕಾರದ ಭೇಟಿಗೆ ಮುಂದಾಗ್ತೀವಿ ಎಂದು ಕಾಮೆಡ್-ಕೆ ಕಾರ್ಯದರ್ಶಿ ಎಸ್. ಕುಮಾರ್ ಹೇಳಿದ್ದಾರೆ.

Edited By : Somashekar
PublicNext

PublicNext

28/07/2022 02:00 pm

Cinque Terre

22.11 K

Cinque Terre

0

ಸಂಬಂಧಿತ ಸುದ್ದಿ