ಬೆಂಗಳೂರು : ಶಿಕ್ಷಣ ಇಲಾಖೆ ಈಗ ಹೊಸದೊಂದು ಅದೇಶ ತಂದು ಖಾಸಗಿ ಶಾಲೆಗಳ ಕೆಂಗಣ್ಣಿಗೆ ಗುರಿಯಾರಿದೆ. ಹೌದು ಸುಮಾರು 980 ಖಾಸಗಿ ಶಾಲೆಗಳನ್ನ ಅನಧಿಕೃತ ಪಟ್ಟಿಗೆ ಸೇರಿಸಲು ಶಿಕ್ಷಣ ಇಲಾಖೆ ತಯಾರಿ ಮಾಡಿಕೊಂಡಿದೆ.
ಇದು ಬರೋಬ್ಬರಿ 30,000 ವಿದ್ಯಾರ್ಥಿಗಳಿಗೆ ಸಂಕಷ್ಟ ತಂದಿದೆ.1 ರಿಂದ 10 ನೇ ತರಗತಿವರೆಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ವ್ಯಾಸಂಗ ನಡೆಯುತ್ತಿದ್ದು,ದಿನಕ್ಕೊಂದು ಆದೇಶ ಹೊರಡಿಸುವ ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಅಧ್ಯಕ್ಷ ಲೊಕೇಶ್ ತಾಳಿಕಟ್ಟೆ ಗರಂ ಆಗಿದ್ದಾರೆ.
2022-23 ರ ಶೈಕ್ಷಣಿಕ ವರ್ಷಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ಸುತ್ತೋಲೆಯನ್ನ ಶಿಕ್ಷಣ ಇಲಾಖೆ ಹೊರಡಿಸಿದೆ.
ಜುಲೈ 19 ರಂದು ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ
ಜುಲೈ 25 ರವರೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.ಇದೀಗ ಮತ್ತೆ ಶಿಕ್ಷಣ ಇಲಾಖೆಯಿಂದ ಮತ್ತೊಂದು ಆದೇಶ ಹೊರಬಿದ್ದಿದ್ದು,2022-23 ರ ಶೈಕ್ಷಣಿಕ ವರ್ಷದ ಮಾನ್ಯತೆ ಅವಧಿ ಮುಕ್ತಾಯವೆಂದು,ಮಾನ್ಯತೆ ಇಲ್ಲದೆ ಶಾಲೆಗಳನ್ನ ಕಾನೂನು ಬಾಹಿರ ಎಂದು ಘೋಷಣೆ ಮಾಡುವಂತೆ ಬಿಇಒ ಗಳಿಗೆ ಸೂಚನೆ ನೀಡಿದೆ.
ಈ ಆದೇಶ ಹಿಂಪಡೆಯುವಂತೆ ಶಿಕ್ಷಣ ಇಲಾಖೆಗೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯ ಮಾಡಿದ್ದಾರೆ.
ವಿಡಿಯೋ ಬಳಸಿ- ಲೋಕೇಶ್ ತಾಳಿಕಟ್ಟೆ, ರುಪ್ಸಾ ಅಧ್ಯಕ್ಷ.
PublicNext
23/07/2022 11:03 am