ನೆಲಮಂಗಲ: ಸ್ನೇಹಿತರ ಜೊತೆಗೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಈ ಫೋಟೋದಲ್ಲಿ ಕಾಣ್ತಿರೋ 16 ವರ್ಷದ ಬಾಲಕ ಹೆಸ್ರು ಸೈಯದ್ ಸಾಕೀಬ್ ಮೃತಪಟ್ಟವನು. ಈತ ಮೂಲತಃ ಎಂ.ಎಸ್ ಪಾಳ್ಯದ ಅನ್ಸರ್ ಪಾಷಾ ಮತ್ತು ಶಿಕ್ಷಕಿ ಅಭೀದಾ ದಂಪತಿ ಪುತ್ರ.
ಈತ 10 ನೇ ತರಗತಿ ಪರೀಕ್ಷೆ ಬರೆದಿದ್ದು ಇಂದು ರಿಸಲ್ಟ್ಗಾಗಿ ಕಾಯ್ತಿದ್ದ. ರಿಸಲ್ಟ್ ಬಂದ ಮೇಲೆ ಕಾಲೇಜು ಅಡ್ಮಿಷನ್ ಅಂತಾ ಕೆಲ್ಸ ಇರುತ್ತೆ. ಇವತ್ತು ಕೆರೆ ತುಂಬಿದೆ ನೋಡಿ ಬರ್ತೀನಿ ಅಮ್ಮ ಅಂತಾ ಮನೆಯಲ್ಲಿ ಹೇಳಿದ್ನಂತೆ. ನಂತರ ನಿನ್ನೆ ಸ್ನೇಹಿತರಾದ ಅಮೀನ್ ಅಹ್ಮದ್, ಅನ್ವರ್ ಅಹ್ಮದ್ ಎಂಬುವರೊಟ್ಟಿಗೆ ಹೆಸರಘಟ್ಟದ ಕೆರೆಗೆ ಈಜಲು ತೆರಳಿದ್ದ. ಕೆರೆಯ ಆಳ ಅರಿಯದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಘಟನೆಯ ವಿಷಯ ತಿಳಿದ ಸೋಲದೇವನಹಳ್ಳಿ ಠಾಣಾ ಪೊಲೀಸರು ಮತ್ತು ಪೀಣ್ಯಾ ಅಗ್ನಿಶಾಮಕ ದಳ ಸಿಬ್ಬಂದಿಗಳು ಕೆರೆಯಲ್ಲಿ ಮುಳುಗಿದ ಸಾಕೀಬ್ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದು, ಸ್ಥಳೀಯ ಮೀನುಗಾರರ ನೆರವಿನಿಂದ ಶವವನ್ನ ಹೊರತೆಗೆದಿದ್ದಾರೆ. ನಗರದ ಖಾಸಗೀ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಲಾಗಿದ್ದು, ಮಗನನ್ನು ಕಳೆದು ಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ಈ ಬಾಲಕ 87.6 % ರಷ್ಟು ಫಲಿತಾಂಶ ಪಡೆದಿದ್ದ. ಆದ್ರೆ ಇಂದಿನ ಪರೀಕ್ಷೆ ಫಲಿತಾಂಶ ಬರುವುದಕ್ಕೂ ಮೊದಲೇ ಸಾವನ್ನಪ್ಪಿದ್ದು ಮಾತ್ರ ದುರಂತವೇ ಸರಿ..
PublicNext
19/05/2022 08:37 pm