ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕೆಂಪೇಗೌಡ ಜಯಂತಿ ಆಚರಿಸಿದ ಶಾಸಕ ಜಮೀರ್ ಅಹಮದ್ ಖಾನ್

ಬೆಂಗಳೂರು : ಬೆಂಗಳೂರು ಎಂಬ ಸುಂದರ ಅದ್ಭುತ ನಗರಿಯ ನಿರ್ಮಾತೃರಾದ ಹೆಮ್ಮೆಯ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯನ್ನು ಇಂದು ಚಾಮರಾಜಪೇಟೆ ಕ್ಷೇತ್ರದ ಶಾಸಕರು ಮತ್ತು ಮಾಜಿ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರು, ತಮ್ಮ ಶಾಸಕರ ಕಛೇರಿಯ ಮುಂಭಾಗದಲ್ಲಿ ವಿಜೃಂಭಣೆಯಿಂದ ಆಚರಿಸಿದರು.

ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್

ಅಂದು ಶ್ರೀ ಕೆಂಪೇಗೌಡರು ತಮ್ಮ ದೂರದೃಷ್ಟಿಯಿಂದ ನಿರ್ಮಿಸಿದ ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದಿದೆ.

ಅಸಂಖ್ಯಾತ ಜನರಿಗೆ ಆಶ್ರಯ ತಾಣವಾಗಿದೆಯಲ್ಲದೇ, ಸಾಕಷ್ಟು ಜನರಿಗೆ ಉದ್ಯೋಗಗಳನ್ನೂ ನೀಡಿದೆ. ಇಂತಹ ಅದ್ಭುತ ನಗರವನ್ನು ನಿರ್ಮಿಸಿದ ನಾಡಪ್ರಭುಗಳ ಸಾಧನೆಯನ್ನು ಎಷ್ಟು ಹೊಗಳಿದರೂ ಸಾಲದು ಎಂದರು.

-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Shivu K
Kshetra Samachara

Kshetra Samachara

27/06/2022 08:37 pm

Cinque Terre

6.93 K

Cinque Terre

0