ಬೆಂಗಳೂರು: ಕೆಂಗೇರಿ ಉಪನರಗದಲ್ಲಿರುವ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೆಜ್ಜೆನಾದ ಗ್ರಂಥ ಬಿಡುಗಡೆಯಾಗಿದೆ. ಪ್ರೊ.ಎ.ವಿ ಸೂರ್ಯನಾರಾಯಣಸ್ವಾಮಿ ಮತ್ತು ಎಚ್.ಎಸ್. ಗೋವಿಂದಗೌಡ ಗ್ರಂಥದ ಕತೃಗಳಾಗಿದ್ದಾರೆ..
ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್, ಡಾ.ಮಹೇಶ್ ಜೋಶಿ, ಎಚ್.ಎಸ್.ಸುಧೀಂದ್ರ ಕುಮಾರ್ ಸೇರಿದಂತೆ ಹಲವಾರು ಸಾಹಿತಿಗಳು ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು..ಪುಸ್ತಕದಲ್ಲಿ ಪುರಾತನ ಕವಿಗಳ ಸಾಹಿತ್ಯವನ್ನ ಮತ್ತೊಮ್ಮೆ ಸಂಗ್ರಹಿಸಿ ಅದನ್ನ ಅರ್ಥ ಬದ್ಧವಾಗಿ ಉಲ್ಲೇಖಿಸಲಾಗಿದೆ..
ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊಫೆಸರ್ ಎ.ವಿ ಸೂರ್ಯನಾರಾಯಣಸ್ವಾಮಿ ಎಲ್ಲಾ ಭಾಷೆಗಳಿಗೂ ಅದರದ್ದೇ ಆದ ವಿಶಿಷ್ಟತೆ ಇದೆ. ಎಲ್ಲಾ ಭಾಷೆಯಲ್ಲಿರುವ ಸಾಹಿತ್ಯದ ಬಗ್ಗೆ ಈ ಪುಸ್ತಕದಲ್ಲಿ ಅರ್ಥ ಸಿಗುತ್ತೆ.. ರನ್ನ ,ಪೊನ್ನ, ಪುರಂದರ ದಾಸ, ಇವರೆಲ್ಲರ ನಾಣ್ಣುಡಿಗಳ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಲ್ಲಿ ಹೊಸತನವನ್ನ ಕ್ರಿಯೇಟ್ ಮಾಡಿದ್ದಾರೆ ಎಂದರು.
ರಂಜಿತಾಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು..
Kshetra Samachara
11/06/2022 09:49 pm