ಆನೇಕಲ್: ಕಾಡಂಚಿನಲ್ಲಿ ವಾಸವಾಗಿರೋ ಕುಟುಂಬಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಉಚಿತವಾಗಿ ಬೆಡ್ ಶೀಟ್ , ಸೊಳ್ಳಪರದೆ , ಮಾಸ್ಕ್ , ಸ್ಯಾನಿಟೈಸರ್ ಸೇರಿದಂತೆ ಅವಶ್ಯಕ ವಸ್ತುಗಳನ್ನು ಇಡ್ಲಿವಾಡಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ್ ಉಚಿತವಾಗಿ ವಿತರಣೆ ಮಾಡಿದರು.
ಆನೇಕಲ್ ಪಟ್ಟದ ಇಂಡ್ಲವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೂಡಹಳ್ಳಿಯಲ್ಲಿ ಭಾರತ್ ವಿಂಗ್ಸ್ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ್ ಅಧ್ಯಕ್ಷತೆಯಲ್ಲಿ ವೃದ್ಧ ರಿಗೆ ಹಾಗೂ ಬಡ ಕೂಲಿ ಕಾರ್ಮಿಕರಿಗೆ ಅವಶ್ಯಕ ವಸ್ತುಗಳನ್ನ ವಿತರಣೆ ಮಾಡಲಾಯಿತು.
ಚೂಡಹಳ್ಳಿ ಶಾಲಾ ಆವರಣ ಹಳ್ಳಿಯ ಬೀದಿಗಳನ್ನು ಸ್ವಚ್ಛಗೊಳಿಸಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಮ್ಮನಾಯಕನಹಳ್ಳಿ ಸದಸ್ಯ ಬಸವರಾಜು, ಚೂಡಹಳ್ಳಿ ಸದಸ್ಯ ಆದೂರು ಪ್ರಕಾಶ್ , ಸಂಜಯ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
11/05/2022 10:47 pm