ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕಗಳ ಅಬ್ಬರ

ದೊಡ್ಡಬಳ್ಳಾಪುರ: ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಅಲ್ಪ ವಿರಾಮ ಹಾಕುವ ರೈತರು ಪೌರಾಣಿಕ ನಾಟಕಗಳ ತಾಲೀಮು ನಡೆಸುತ್ತಾರೆ. ಗ್ರಾಮೀಣರಲ್ಲಿ ಅಡಗಿರುವ ಪ್ರತಿಭೆಯ ಅನಾವರಣಕ್ಕೆ ಇದೇ ನಾಟಕಗಳು ಪ್ರಮುಖ ವೇದಿಕೆಯಾಗಿವೆ. ಇಡೀ ರಾತ್ರಿ ನಡೆಯುವ ನಾಟಕಗಳು ಗ್ರಾಮದಲ್ಲಿ ಹಬ್ಬದ ವಾತಾವರಣವನ್ನುಂಟು ಮಾಡುತ್ತವೆ.

ಬೇಸಿಗೆ ಕಾಲದಲ್ಲಿ ಯಾವುದೇ ಗ್ರಾಮಕ್ಕೂ ಭೇಟಿ ಕೊಟ್ಟರು ಅಲ್ಲೊಂದು ಪೌರಾಣಿಕ ನಾಟಕದ ತಾಲೀಮು ನಡೆಯೋದು ಸಾಮಾನ್ಯ. ಹಾಗೆಯೇ ಕುರುಕ್ಷೇತ್ರ ನಾಟಕಕ್ಕಾಗಿ ದೊಡ್ಡಬಳ್ಳಾಪುರ ತಾಲೂಕಿನ ಹಳೇಕೋಟೆ ಗ್ರಾಮಸ್ಥರು 3 ತಿಂಗಳಿಂದ ರಂಗ ತಾಲೀಮು ನಡೆಸಿದ್ದರು. ಸತತ ಮೂರು ತಿಂಗಳು ತಾಲೀಮು ನಡೆಸಿದ ಗ್ರಾಮಸ್ಥರು ಇಂದು ಮೇಕಪ್ ಮಾಡಿಕೊಂಡು ಕುರುಕ್ಷೇತ್ರದ ಪಾತ್ರದಾರಿಗಳಾಗಿ ಮಿಂಚುತ್ತಿದ್ದಾರೆ. ವೇದಿಕೆಯಲ್ಲಿ ಬಂದು ಡೈಲಾಗ್ ಹೊಡೆಯುತ್ತಿರುವ ಪಾತ್ರಧಾರಿಗಳಿಗೆ ಚಪ್ಪಾಳೆಗಳ ಸನ್ಮಾನ ಜೊತೆಗೆ ಹಣದ ಕಾಣಿಕೆ ಸಹ ಸಿಗುತ್ತಿದೆ.

ಬಹುತೇಕ ಇದೇ ಮೊದಲ ಬಾರಿಗೆ ಗ್ರಾಮಸ್ಥರು ನಾಟಕಕ್ಕೆ ಬಣ್ಣ ಹಚ್ಚುತ್ತಿದ್ದಾರೆ, ನಾಟಕದ ಹಿನ್ನಲೆ ಇಲ್ಲದ ಯುವಕರು ಪೌರಾಣಿಕ ನಾಟಕ ಕಲಿತು 8 ಗಂಟೆಗಳ ಪ್ರದರ್ಶನ ನೀಡಿದ್ದರು. ನಾಟಕ ನೋಡಲಿಕ್ಕೆ ಸಂಬಂಧಿಕರು ಮತ್ತು ಸ್ನೇಹಿತರಿಗೆ ಆಹ್ವಾನ ನೀಡಲಾಗಿತ್ತು, ಜಾತ್ರೆ ಮತ್ತು ಹಬ್ಬಗಳಿಗೆ ಬರುವಂತೆ ಜನರು ಸಂಬಂಧಿಕನ ನಾಟಕ ನೋಡಲು ದೂರದ ಊರುಗಳಿಂದ ಬಂದಿದ್ದರು, ವೇದಿಕೆ ಮೇಲೆ ತಮ್ಮ ಕಡೇಯ ಪಾತ್ರಧಾರಿ ಬಂದಾಗ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದಲ್ಲದೆ ಹಣವನ್ನು ಪಾತ್ರಧಾರಿಯ ಮೇಲೆ ಎಸೆದು ಸಂತೋಷ ಪಡುತ್ತಿದ್ದರು.

ಟಿವಿ ಧಾರವಾಹಿಗಳ ಅಬ್ಬರ ಗ್ರಾಮೀಣ ಭಾಗದಲ್ಲಿ ಜೋರಾಗಿದೆ, ಇದರ ನಡುವೆ ಐಪಿಲ್ ಪಂದ್ಯಗಳು ಯುವಕರನ್ನ ಟಿವಿಯೊಂದಿಗೆ ಬಂಧಿಸಿ ಬಿಟ್ಟಿವೆ, ಇದೆಲ್ಲದರ ನಡುವೆ ಯುವಕರು ಪೌರಾಣಿಕ ನಾಟಕ ಕಲಿತು ಪ್ರದರ್ಶನ ನೀಡಿದ್ದು ಮತ್ತು ನಾಟಕ ನೋಡಲು ಜನರು ಬಂದಿದ್ದು ಕಲೆಯ ಉಳಿವಿಗೆ ಸಹಕಾರಿಯಾಗಲಿದೆ.

Edited By : Manjunath H D
PublicNext

PublicNext

05/04/2022 08:29 am

Cinque Terre

29.6 K

Cinque Terre

0

ಸಂಬಂಧಿತ ಸುದ್ದಿ