ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಪುನೀತ್ ಹುಟ್ಟುಹಬ್ಬದ ಸಂಭ್ರಮಾಚರಣೆ: ಪೌರ ಕಾರ್ಮಿಕರಿಗೆ ಉಚಿತ ಕಿಟ್ ವಿತರಣೆ

ಬೆಂ ದಕ್ಷಿಣ :ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬ ಅಂಗವಾಗಿ ಇಂದು ನಮ್ಮ ಊರು ನಮ್ಮ ಜವಾಬ್ದಾರಿ ಸಂಘಟನೆಯಿಂದ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ಪೌರಕಾರ್ಮಿಕರಿಗೆ ಉಚಿತವಾಗಿ ಕಿಟ್ ವಿತರಣೆ ಮಾಡಲಾಯಿತು. ಸಂಘಟನೆ ವತಿಯಿಂದ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದ ಹಾಗೂ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಇಲ್ಲಿನ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ತಿರುಪಾಳ್ಯ ದಲ್ಲಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು ಅಪ್ಪು ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪಾರ್ಚನೆ ಮಾಡಿದರು.

ಅಪ್ಪು ಸ್ಮರಣೆ ಕಾರ್ಯಕ್ರಮದಲ್ಲಿ ಅಪ್ಪು ಬಾಡಿಗಾರ್ಡ್ ಶ್ರೀನಿವಾಸ್

ಭಾಗಿಯಾಗಿ ಮಾತನಾಡಿದರು. ಅಪ್ಪು ಅವರನ್ನು ನೆನೆದು ಭಾವುಕರಾದರು.ಅವರು ಇಲ್ಲ ಅನ್ನೋದೆ ಒಂದು ಕೊರಗು. ಎಲ್ಲೋ ಒಂದು ಕಡೆ ಇದ್ದು ಅವರು ನಮಗೆ ಆಶೀರ್ವಾದ ಮಾಡುತ್ತಿರುತ್ತಾರೆ. ಪುನೀತ್ ಕುಟುಂಬದಲ್ಲಿ ನಮ್ಮ ನಾಲ್ಕು ಜನ ಅಣ್ಣತಮ್ಮಂದಿರು ಕೆಲಸ ನಿರ್ವಹಿಸುತ್ತಿದ್ದಾರೆ. ಜೇಮ್ಸ್ ಚಿತ್ರದಲ್ಲಿ ವಿಲನ್ ಆಗಿ ಚಾನ್ಸ್ ಸಿಕ್ಕಿತು. ಆದರೆ ಮಾಡಕ್ಕೆ ಆಗಲಿಲ್ಲ ಎಂದು ಬಾಡಿಗಾರ್ಡ್ ಶ್ರೀನಿವಾಸ್ ನೆನೆದು ಭಾವುಕರಾದರು.

Edited By : Nagesh Gaonkar
Kshetra Samachara

Kshetra Samachara

17/03/2022 06:58 pm

Cinque Terre

1.32 K

Cinque Terre

0