ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪುನೀತ್ ರಾಜಕುಮಾರ್ ಸ್ಮರಣಾರ್ಥ ಮಕ್ಕಳ ಹಬ್ಬ

ಯಲಹಂಕ: ಬೆಂಗಳೂರು ನಗರ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ಪುನೀತ್ ರಾಜಕುಮಾರ್ ಸಭಾಂಗಣದಲ್ಲಿ, ಸಿಂಗನಾಯಕನಹಳ್ಳಿಯ ವಿದ್ಯಾಗೋಕುಲ ಸೇವಾಶ್ರಮವು ಮಕ್ಕಳಿಗಾಗಿ ಮಕ್ಕಳ ಹಬ್ಬ 2021 ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿತ್ತು.ಈ ಮಕ್ಕಳ ಹಬ್ಬದಲ್ಲಿ ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ, ರಾಜಾನುಕುಂಟೆ, ಸಿಂಗನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನವಚೇತನ ಹೈಸ್ಕೂಲ್ & ವಿದ್ಯಾಗೋಕುಲ ಮಕ್ಕಳು ಭಾಗವಹಿಸಿ ತಮ್ಮ ಕಲಾಪ್ರತಿಭೆಯನ್ನ ಪ್ರದರ್ಶಿಸಿದರು.

ಸಿಂಗನಾಯಕನಹಳ್ಳಿಯ ಹಿರಿಯ ಪ್ರಾಥಮಿಕ ಶಾಲಾಮಕ್ಕಳ ನೃತ್ಯ, ನವಚೇತನ ಹೈಸ್ಕೂಲ್ ಮಕ್ಕಳ ಹಾಡು, ರಾಜಾನುಕುಂಟೆ ಶಾಲೆಯ ಕಾವ್ಯಶ್ರಿಯ ಹರಹರ ಶಂಕರ ನೃತ್ಯ, ವಿದ್ಯಾಗೋಕುಲ ಸೇವಾಶ್ರಮ ಮಕ್ಕಳ ಯೋಗಾನೃತ್ಯ, ಕರಾಟೆಯ ಸಾಹಸಗಳು ಜನರಿಂದ ಸಖತ್ ಚಪ್ಪಾಳೆ ಗಿಟ್ಟಿಸಿತು. ಇನ್ನು ಕೃಷ್ಣರಾಜಪುರ ಚೀಮಸಂದ್ರದ ಮದರ್ ತೆರೆಸಾ ಚಾರಿಟಬಲ್ ಟ್ರಸ್ಟ್ನ ಮಕ್ಕಳ ಕಂಸಾಳೆ ಸೇರಿದ್ದ ಜನತೆಯ ಭಾರಿ ಪ್ರಶಂಸೆಗೆ ಒಳಗಾಯಿತು. ದೇವನಹಳ್ಳಿ ವಿಶ್ವಕಲಾ ಅಕಾಡೆಮಿಯ ಭರತನಾಟ್ಯ ಚನ್ನಾಗಿತ್ತು.. ಕಳೆದ ಎರಡು ವರ್ಷಗಳಿಂದ ಶಾಲೆಗಳ ಬಂದ್, ಸೂಕ್ತ ವೇದಿಕೆಗಳಿಲ್ಲದೆ, ಪ್ರತಿಭೆಯನ್ನ ಪ್ರದರ್ಶಿಸಲಾಗದೆ ಸೊರಗಿದ್ದ ಪ್ರಾಥಮಿಕ & ಪ್ರೌಢಶಾಲಾ ಮಕ್ಕಳಿಗೆ ವಿದ್ಯಾಗೋಕುಲ ಸೇವಾಶ್ರಮದ ಮಕ್ಕಳ ಹಬ್ಬ 2021 ಸೂಕ್ತ ವೇದಿಕೆಯಾಗಿತ್ತು ಅಂತಾರೆ ಪೋಷಕರು ಮತ್ತು ಸೇವಾಶ್ರಮದವರು.

ಮಕ್ಕಳ ಶಾರೀರಿಕ ಸಾಮರ್ಥ್ಯಕ್ಕೆ ಕರಾಟೆ ಹೇಳಿ ಮಾಡಿಸಿದ ಸಾಹಸ ಕ್ರೀಡೆ. ದೊಡ್ಡಬಳ್ಳಾಪುರ ತಾಲೂಕಿನ ಬಸಂತಪುರದ ಕರಾಟೆ ಮಕ್ಕಳ ಬೆಂಕಿ ಅಲೆಯೊಳಗೆ ಸಾಹಸ, ಕರಾಟೆ ಪ್ರದರ್ಶನ ಜನರನ್ನು ಆಶ್ಚರ್ಯಕ್ಕೆ ದೂಡಿತ್ತು. ಇನ್ನು ವಿಶ್ವಭಾರತಿ ಕಲಾತಂಡದ ಜಂಬೆ ಮೂರ್ತಿರವರ ಜಂಬೆವಾದನ ಎಲ್ಲರೂ ಚಪ್ಪಾಳೆ ತಟ್ಟುವಂತೆ ಮಾಡಿತ್ತು. ಬಸಂತಪುರ ಮಕ್ಕಳ ಹಾಡು ನೃತ್ಯ ಚನ್ನಾಗಿತ್ತು. ನಿರೀಕ್ಷೆಗೂ ಮೀರಿ ತಂಡಗಳು ಭಾಗವಹಿಸಿದ್ದು ಖುಷಿಯ ವಿಷಯ. ಇದೇ ರೀತಿ ಕಾರ್ಯಕ್ರಮ ಮುಂದೆಯೂ ನಡೆಯಲಿ. ಅವು ಮಕ್ಕಳ ಬೆಳವಣಿಗೆಗೆ ಪೂರಕವಾಗಲಿ ಅಂತಾರೆ ಗುರೂಜಿಗಳು & ಅಧಿಕಾರಿಗಳು..

ಉತ್ತಮ, ಅತ್ಯುತ್ತಮ ಬಹುಮಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯ್ತು. ಅಂತು ಸಿಂಗನಾಯಕನಹಳ್ಳಿಯ ವಿದ್ಯಾಗೋಕುಲ ಸೇವಾಶ್ರಮದ 2021ರ ವರ್ಷದ ಕೊನೆಯ ಮಕ್ಕಳಹಬ್ಬ ನೆರೆದಿದ್ದ ಸಾವಿರಾರು ಜನರ ಮನಸೂರೆಗೊಂಡಿತು.

ಸುರೇಶ್ ಬಾಬು..Public Next ದೇವನಹಳ್ಳಿ..

Edited By : Manjunath H D
PublicNext

PublicNext

02/01/2022 05:33 pm

Cinque Terre

41.22 K

Cinque Terre

0