ಚಾಮರಾಜಪೇಟೆ: ಇಂದು ಸುಪ್ರೀಂನಲ್ಲಿ ಈದ್ಗಾ ಅರ್ಜಿ ವಿಚಾರಣೆ ಇದ್ದು, ಗಣೇಶ ಕೂರಿಸಲು ನಮ್ಮ ಪರವಾಗಿ ತೀರ್ಪು ಬರಲೆಂದು
ಚಾಮರಾಜಪೇಟೆಯ ಮಲೆಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ. ಚಾಮರಾಜಪೇಟೆ ನಾಗರೀಕ ಒಕ್ಕೂಟದ ವತಿಯಿಂದ ಮಾದಪ್ಪನಿಗೆ 101ತೆಂಗಿನಕಾಯಿ ಒಡೆದು ದೇವರಲ್ಲಿ ಭಕ್ತರು ಮನವಿಯಿಟ್ಟಿದ್ದಾರೆ.
ಹೈಕೋರ್ಟ್ ಗಣೇಶ ಕೂರಿಸೋ ವಿಚಾರವನ್ನ ಸರ್ಕಾರದ ವಿಚೇಚನೆಗೆ ಬಿಟ್ಟಿತ್ತು. ಸರ್ಕಾರ ಕೂಡ ಗಣೇಶ ಕೂರಿಸಲು ಅನುಮತಿ ನೀಡಿ ಸಿದ್ಧತೆ ನಡೆಸಿದ ಬೆನ್ನಲ್ಲೆ ವಕ್ಫ್ ಬೋರ್ಡ್ ಮತ್ತು ಮುಸ್ಲಿಂ ಸಂಘಟನೆ ಇದನ್ನ ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ್ರು. ಇಂದು ಸುಪ್ರೀಂ ಆದೇಶ ಹೊರ ಬೀಳಲಿದ್ದು ಎಲ್ಲರ ಚಿತ್ತ ಸುಪ್ರೀಂ ನತ್ತ ನೆಟ್ಟಿದೆ.
PublicNext
30/08/2022 01:32 pm