ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಬಣ್ಣದ ಲೋಕ"ದಲ್ಲಿ ಚಿಣ್ಣರ ವಿಹಾರ; "ಹೊಸ ಚಿಗುರು" ಹೊಸ ದಾಖಲೆ ನಿರ್ಮಾಣ!

ಬೆಂಗಳೂರು: ವಾರಪೂರ್ತಿ ಶಾಲೆ- ಟ್ಯೂಶನ್ ಅಂತ ಬಿಜಿಯಾಗಿದ್ದ ಮಕ್ಕಳು ಇವತ್ತು ಒಂದು ಕೈಯಲ್ಲಿ ಪೇಪರ್, ಇನ್ನೊಂದು ಕೈಯಲ್ಲಿ ಪೇಂಟ್ ಬ್ರಷ್, ಸ್ಕೆಚ್ ಪೆನ್ಸಿಲ್ ಹಿಡಿದು ಆಟದ ಮೈದಾನದ ಕಡೆ ಹೆಜ್ಜೆ ಹಾಕಿದರು.

ಒಂದು ಕಡೆ ಚಿಣ್ಣರೆಲ್ಲ ಚಿತ್ರ ಬಿಡಿಸುವುದರಲ್ಲೇ ನಿರತರಾಗಿದ್ದರೆ, ಮತ್ತೊಂದು ಕಡೆ ಪೋಷಕರು ಪ್ರೋತ್ಸಾಹಿಸುತ್ತಿದ್ದರು. ಈ ನೋಟ ಕಂಡು ಬಂದಿದ್ದು ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ.

ಇಂದು ಮಕ್ಕಳಿಗಾಗಿ ಜಯನಗರದಲ್ಲಿ ಕಾಲೊರೋಥನ್ ಕಾರ್ಯಕ್ರಮ "ಹೊಸ ಚಿಗುರು" ಎನ್‌ ಜಿಒ ನಡೆಸಿದರು. ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಹಲವು ಶಾಲೆಗಳ ನೂರಾರು ಮಕ್ಕಳು ಪಾಲ್ಗೊಂಡಿದ್ದರು.

ಹಲವಾರು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಹೊಸ ಚಿಗುರು ಸಂಸ್ಥೆಯು ಈ ಬಾರಿ ತಾವೇ ಮಾಡಿದ್ದ ದಾಖಲೆ ಮುರಿದರು. 2 ವರ್ಷಗಳ ಹಿಂದೆ 7000 ಪೇಂಟಿಂಗ್ ದಾಖಲೆ ಮಾಡಿದ್ದು, ಈ ಬಾರಿ ಆ ದಾಖಲೆ ತಾವೇ ಮುರಿದಿದ್ದಾರೆ.

- ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Nagesh Gaonkar
PublicNext

PublicNext

07/08/2022 08:08 pm

Cinque Terre

43.91 K

Cinque Terre

0

ಸಂಬಂಧಿತ ಸುದ್ದಿ