ಬೆಂಗಳೂರು: ಸಶಸ್ತ್ರ ಮೀಸಲು ಪಡೆಯ (ಸಿ.ಎ.ಆರ್) ಇನ್ಸ್ಪೆಕ್ಟರ್ ಸಂಜೀವ್ ದಂಪತಿಯಿಂದ ಜಾಲಿ ರೈಡ್ ಮಾಡಲು ಹೋಗಿ ನಗರದ ಚಾಮರಾಜಪೇಟೆ ಪೊಲೀಸ್ ಠಾಣೆ ಮುಂಭಾಗ ಕಿರಿಕ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಸಂಜೀವ್ ಹಾಗೂ ಪತ್ನಿ ಉಷಾ ಜಾಲಿ ರೈಡ್ ಹೋಗಿದ್ದರು. ಚಾಮರಾಜಪೇಟೆ 6ನೇ ಮುಖ್ಯ ರಸ್ತೆ ಬಳಿ ದಂಪತಿಯ ಜಾಲಿ ರೇಡ್ ಗೆ 2 ಕಾರುಗಳು ಡ್ಯಾಮೇಜ್ ಆಗಿದೆ. ಆಕ್ರೋಶಗೊಂಡ ಸ್ಥಳೀಯರು ದಂಪತಿಗೆ ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಂಜೀವ್ ದಂಪತಿ ಯುವಕರ ಮೇಲೆ ಹಲ್ಲೆ ನೆಡೆಸಿದ್ದಾರೆ ಎನ್ನಲಾಗಿದೆ.
ಸದ್ಯ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಉಷಾ ದೂರು ನೀಡಿದ್ದು, ದಂಪತಿಗಳ ಮೇಲೆ ಯುವಕರಿಂದ ಪ್ರತಿದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.
PublicNext
04/09/2022 01:44 pm