ಬೆಂಗಳೂರು : ಕಳ್ಳತನ ಪ್ರಕರಣಗಳು ಬಿಟಿಎಂ ಲೇಔಟ್ ನಲ್ಲಿ ಹೆಚ್ಚಾಗಿದ್ದು ಇದರಿಂದ ಏರಿಯಾದ ನಿವಾಸಿಗಳು ಭಯಭೀತ ಗೊಂಡಿದ್ದಾರೆ. ಇಷ್ಟು ದಿನ ಬೆಳಗಿನ ಜಾವ ಗಾಡಿಯಲ್ಲಿ ಬಂದು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಬ್ಯಾಟರಿಗಳನ್ನು ಕದ್ದು ಹೋಗುತ್ತಿದ್ದ ಕಳ್ಳರು ಈಗ ಮುಖ್ಯರಸ್ತೆಯಲ್ಲಿರುವ ಬೇಕರಿ ಗಳನ್ನೇ ಟಾರ್ಗೆಟ್ ಮಾಡಿದ್ದಾರೆ.
ಶುಕ್ರವಾರ ಮಧ್ಯರಾತ್ರಿಯಲ್ಲಿ ಟು ವೀಲರ್ ನಲ್ಲಿ ಬಂದ ಇಬ್ಬರು ಯುವಕರು ಕೈಯಲ್ಲಿ ರಾಡ್ ಹಿಡಿದು ಬೇಕರಿಗಳ ಶಟರ್ ಒಡೆಯಲು ಮುಂದಾಗಿದ್ದಾರೆ.
ಯಾವುದೇ ಭಯ ಭೀತಿಯಿಲ್ಲದೇ ಬಿಟಿಎಂ ಲೇಔಟ್ 29ನೇ ಮುಖ್ಯರಸ್ತೆಯಲ್ಲಿರುವ ಬೇಕರಿಗಳ ಶೆಟ್ಟರ್ ಒಡೆಯಲು ಕಳ್ಳರು ಮುಂದಾಗಿದ್ದರು. ಆದರೆ ಕಳ್ಳರ ಪ್ರಯತ್ನ ವಿಫಲಗೊಂಡಿದೆ ಯಾಕೆಂದರೆ ಬೇಕರಿಗಳ ಶೆಟ್ಟರ್ ಗಳಲ್ಲಿ ಮಧ್ಯಭಾಗದಲ್ಲಿ ಲಾಕ್ ಆಗಿದ್ದ ಕಾರಣ ಬೇಕರಿಯ ಸೈಡ್ ಶೆಟ್ಟರ್ ಒಡೆದರು ಮಧ್ಯಭಾಗ ಓಪನ್ ಆಗಿಲ್ಲ.
ಈ ರೀತಿಯ ಕಳ್ಳತನ ಪ್ರಕರಣಗಳಿಂದ ಬಿಟಿಎಂ ಲೇಔಟ್ ನಿವಾಸಿಗಳು ಭಯಭೀತ ಗೊಂಡಿದ್ದಾರೆ. ಈ ರೀತಿ ಪದೇ ಪದೇ ಬಿಟಿಎಂ ಲೇಔಟ್ ನಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎನ್ನುವುದು ಎದ್ದು ಕಾಣುತ್ತಿದೆ. ಈಗಾದರೂ ಪೊಲೀಸರು ಎಚ್ಚೆತ್ತುಕೊಂಡು ಶೀಘ್ರ ಕಳ್ಳರನ್ನು ಬಂಧಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
Kshetra Samachara
19/08/2022 09:02 pm