ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಲೆಮಾರಿಗಳ ಸೋಗಿನಲ್ಲಿ ಡ್ರಗ್ಸ್ ಸಾಗಾಟ: ಡಿಜೆ ಸೇರಿ ಐವರ ಬಂಧನ

ಬೆಂಗಳೂರು: ಅಲೆಮಾರಿಗಳ ಸೋಗಿನಲ್ಲಿ ನೆಲ್ಲೂರಿನಿಂದ ಮಾದಕ ವಸ್ತು ಹ್ಯಾಶೀಶ್ ಆಯಿಲ್ ಸಪ್ಲೈ ಮಾಡುತ್ತಿದ್ದ ಅಂತರ್ ರಾಜ್ಯ ಖದೀಮರನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ಮಾಸ್ಟರ್ ಮೈಂಡ್ ಬೆಂಗಳೂರಿನ ಪ್ರತಿಷ್ಠಿತ ಪಬ್ ಗಳಲ್ಲಿ ಡಿಜೆಯಾಗಿ‌ ಕೆಲಸ ಮಾಡುತ್ತಿದ್ದ ಜೂಡ್ ಹ್ಯಾರಿಸ್,ಶ್ರೀನಿವಾಸ್,ವಂತಲಾ ಪ್ರಹ್ಲಾದ್,ಮಲ್ಲೇಶ್ವರಿ, ಸತ್ಯವತಿ ಎಂಬುವವರನ್ನು ಬಂಧಿಸಿದ್ದಾರೆ.

ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕು ಹಾಗೂ ಸೆಂಥಿಪಲ್ಲಿ ಅರಣ್ಯಕ್ಕೆ ಅಧಿಕಾರಿಗಳ ಕಣ್ಣು ತಪ್ಪಿಸಿ ನುಗ್ಗುತ್ತಿದ್ದರು. ಕಾಡಿನಲ್ಲಿ 30 ಕಿಲೋ ಮೀಟರ್ ಸಂಚರಿಸಿ ಗಾಂಜಾ ಬೆಳೆದು ಹ್ಯಾಶಿಶ್ ಆಯಿಲ್ ತಯಾರಿಸುತ್ತಿದ್ದರು. ಕೊಚ್ಚಿನ್, ಚೆನ್ನೈ,ಹೈದರಾಬಾದ್, ಮುಂಬೈ, ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಮಾರಾಟ ಜಾಲವನ್ನು ಹೊಂದಿದ್ದರು.

ಆರೋಪಿಗಳು ದಂಧೆಯ ಯಾವುದೇ ಸಾಕ್ಷ್ಯ ಸಿಗಬಾರದು ಅಂತ ಮೊಬೈಲ್ ಫೋನ್, ಗುರುತಿನ ಚೀಟಿ ಬಳಸುತ್ತಿರಲಿಲ್ಲ. ಈ ಗ್ಯಾಂಗ್ ಬೆನ್ನು ಬಿದ್ದಿದ್ದ ಸಿಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಡಿಜೆ ಜೂಡ್ ಬಂಧಿಸಿ ವಿಚಾರಣೆ ನಡೆಸಿದಾಗ ಉಳಿದವರ ಹೆಸರನ್ನು ಬಾಯ್ಬಿಟ್ಟಿದ್ದಾನೆ.

ಸದ್ಯ ಐವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ 4 ಕೋಟಿ ಮೌಲ್ಯದ 5 ಕೆಜಿ ಹ್ಯಾಶಿಶ್ ಆಯಿಲ್, 6 ಕೆಜಿ ಗಾಂಜಾ ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Edited By : Somashekar
PublicNext

PublicNext

13/07/2022 05:00 pm

Cinque Terre

33.91 K

Cinque Terre

0

ಸಂಬಂಧಿತ ಸುದ್ದಿ