ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚೌಡೇಶ್ವರಿ ದೇವಿಯ ಚಿನ್ನದ ತಾಳಿ ಕಳ್ಳತನ, ಆರೋಪಿ ಬಂಧನ

ಬೆಂಗಳೂರು: ವೈಟ್ ಫೀಲ್ಡ್ ವಿಭಾಗದ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಯಮಲೂರು ಮುಖ್ಯ ರಸ್ತೆಯಲ್ಲಿರುವ ಚೌಡೇಶ್ವರಿ ದೇವಿಯ ಮೇಲಿದ್ದ 48 ಗ್ರಾಂ ತೂಕದ ಒಂದು ಚಿನ್ನದ ತಾಳಿಯನ್ನು ಕಳವು ಮಾಡಿದ್ದ ಆರೋಪಿಯನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಚಂದ್ರಶೇಖರ ಬಂಧಿತ ಆರೋಪಿ. ಆರೋಪಿಯಿಂದ 3 ಲಕ್ಷ ರೂಪಾಯಿ ಬೆಲೆಬಾಳುವ ಒಟ್ಟು ೬೫ ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಠಾಣಾ ಸರಹದ್ದಿನಲ್ಲಿ ನಡೆದ ಎರಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದಿದ್ದು ಆರೋಪಿಯ ಹೇಳಿಕೆಯ ಮೇರೆಗೆ ಒಟ್ಟು 3 ಅಪರಾಧ ಪ್ರಕರಣಗಳು ಪತ್ತೆಯಾಗಿವೆ.

Edited By : PublicNext Desk
Kshetra Samachara

Kshetra Samachara

08/07/2022 04:09 pm

Cinque Terre

1.44 K

Cinque Terre

0

ಸಂಬಂಧಿತ ಸುದ್ದಿ