ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಹಣದಾಸೆಗೆ ಗರ್ಭಧರಿಸಿದ್ದ ಹಸುವಿನ ಹತ್ಯೆ ಮಾಡಲಾಗಿದ್ದು, ಹಸುವನ್ನ ಕಳ್ಳತನ ಮಾಡಿ ಕೊಂದಿದ್ದ ಆರೋಪಿಗಳನ್ನು ಈಗ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬರ್ಕತ್, ಮೊಹಮದ್ ಇಮ್ರಾನ್ ಪಾಷಾ ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ಸುಹೈಲ್ ಎಂಬಾತ ಪರಾರಿಯಾಗಿದ್ದಾನೆ.
ಜೂನ್ 6 ರಂದು ಹೆಚ್ ಬಿ.ಆರ್.ಲೇಔಟ್ ನಲ್ಲಿ ಬೆಳಗಿನ ಜಾವ ಪೊಲೀಸರು ಗಸ್ತಿನಲ್ಲಿದ್ದ ವೇಳೆ ಆಟೋದಲ್ಲಿ ಅನುಮಾನಸ್ಪದವಾಗಿ ಮೂವರು ಓಡಾಡುತ್ತಿದ್ದರು. ಈ ವೇಳೆ ಆಟೋ ನಿಲ್ಲಿಸುವಂತೆ ಪೊಲೀಸರು ಸೂಚಿಸಿದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಬೆನ್ನಟ್ಟಿ ಆಟೋ ನಿಲ್ಲಿಸಿ ಆರೋಪಿಗಳ ವಿಚಾರಣೆ ನಡೆಸಿದಾಗ ಹಸು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳು ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ತೋಪಿನ ಬಳಿ ಹಸು ಕಳ್ಳತನ ಮಾಡಿ ತಮ್ಮ ಮನೆಯ ಬಳಿ ಹತ್ಯೆ ಮಾಡಿದ್ದಾರೆ. ಸದ್ಯ ಗರ್ಭಧರಿಸಿದ್ದ ಹಸುವಿನ, ಮಾಂಸ ಚರ್ಮ ಹಾಗೂ ಅದರ ಕರುವಿನ ಮೃತದೇಹ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಸೆರೆ ಸಿಕ್ಕ ಸಮಯದಲ್ಲಿ ಹಸು ಹತ್ಯೆ ಮಾಡಿ ಮಾಂಸದ ಅಂಗಡಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆಟೋ ಜಪ್ತಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
Kshetra Samachara
11/06/2022 05:50 pm