ಬೆಂಗಳೂರು: ಟೋಪಿ ಖರೀದಿ ಮಾಡಿ ಬಟ್ಟೆ ಅಂಗಡಿ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಯುವಕರ ಪುಂಡಾಟಿಕೆಯ ಸಂಪೂರ್ಣ ಡೀಟೇಲ್ಸ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಕೆ.ಆರ್ ರಸ್ತೆಯಲ್ಲಿ ಪುಂಡರ ಗುಂಪು ಬಟ್ಟೆ ಅಂಗಡಿ ಮಾಲೀಕರ ಮೇಲೆ ಹಲ್ಲೆ ಕೃತ್ಯ ನಡೆದಿದೆ. ಅಂದಹಾಗೆ ಇಲ್ಲಿನ ಪದಮ್ ಶ್ರೀ ಬಟ್ಟೆ ಅಂಗಡಿಗೆ ನಾಲ್ಕು ಜನ ಮುಸ್ಲಿಂ ಯುವಕರ ಗ್ಯಾಂಗ್ ಬಂದಿದೆ. ಈ ವೇಳೆ ಟೋಪಿಗಳನ್ನ ತೋರಿಸಿ ಎಂದ ಈ ಗ್ಯಾಂಗ್ ಇದ್ದಕ್ಕಿದ್ದಂತೆ ಸಿಬ್ಬಂದಿ ಬಳಿ ಕ್ಯಾತೆ ತೆಗೆದು ಜಗಳಕ್ಕೆ ಇಳಿದಿದೆ. ನೋಡ ನೋಡುತ್ತಿದ್ದಂತೆ ಈ ಪುಂಡರು ಬಟ್ಟೆ ಅಂಗಡಿ ಸಿಬ್ಬಂದಿ ಹಾಗೂ ಮಾಲೀಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇನ್ನೂ ಈ ಪುಂಡರ ಗಲಾಟೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಸಂಬಂಧ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಧಾಂದಲೆ ನಡೆಸಿದ ಪುಂಡರಿಗಾಗಿ ಬಲೆ ಬೀಸಿದ್ದಾರೆ. ಕೃತ್ಯದ ಬಗ್ಗೆ ಪೊಲೀಸರು ಕ್ರಮ ಜರುಗಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಅಂತಾರೆ ಅಂಗಡಿ ಮಾಲೀಕ.
PublicNext
28/05/2022 08:28 pm