ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿವೃತ್ತ ಯೋಧನೊಬ್ಬನ ಬರ್ಬರ ಹತ್ಯೆಯಾಗಿತ್ತು.. ಯೋಧನನ್ನು ಕೊಂದವರನ್ನು 24 ಗಂಟೆಯೊಳಗೆ ಬಂಧಿಸಲಾಗಿದೆ.. ಆದ್ರೆ ಕೊಲೆ ಮಾಡಲು ಹಾಕಿದ್ದ ಸ್ಕೆಚ್.. ಕೊಲೆಯಲ್ಲಿ ಅವಳಲ್ಲ ಅವನ ಪಾತ್ರ ರಿವೀಲ್ ಆಗಿದೆ..
ಕಾರಿನಲ್ಲಿ ಕುಳಿತು ಫೋಸ್ ಕೊಡ್ತಿರೋ ಇವನನ್ನೂ ಗಮನಿಸಿ.ಹಾಗೇ ಹೆಣ್ಣಿನಂತೆ ಮಿಂಚ್ತಿರೋ ಇವಳನ್ನು ನೋಡ್ಕೊಂಬಿಡಿ.. ಈ ಮೂರು ಫೋಟೋ ಒಬ್ಬನದ್ದೇ ಇವನೇ ಅವಳಲ್ಲ ಅವನು.. ಕೊಲೆಯ A1 ಆರೋಪಿ ಬಾಬು ಅಲಿಯಾಸ್ ನರ್ಸ್ ಬಾಬು
ಮನೆಯಲ್ಲಿ ಆರೋಗ್ಯ ಬಗ್ಗೆ ಕೇರ್ ಮಾಡಲು ಬಂದ ಬಾಬು ಅಲಿಯಾಸ್ ನರ್ಸ್ ಯೋಧ ಸುರೇಶ್ ಅಲಿಯಾಸ್ ಜೂಡ್ ಜೊತೆ ಕ್ಲೋಸ್ ಆಗಿದ್ದ.. ಸುರೇಶ್ ಬಾಬುವಿನ ಆಂತರ್ಯದ ಹೆಣ್ಣಾಟಕ್ಕೆ ಮರುಳಾಗಿದ್ದ. 15 ದಿನಗಳ ಆತ್ಮೀಯ ಓಡನಾಟ ತನ್ನನ್ನು ಸಾವಿನಂಚಿಗೆ ಕರೆದುಕೊಂಡು ಹೋಗುತ್ತೆ ಅನ್ನೋದು ಗೊತ್ತಿರಲಿಲ್ಲ.ಬಾಬು ಅಲಿಯಾಸ್ ನರ್ಸ್ ಆಂಧ್ರದ ಸಹಚರರನ್ನು ಕರೆಸಿಕೊಂಡು ಹಣವನ್ನು ಚಿನ್ನಾಭರಣ ಎಗರಿಸಲು ಸ್ಕೆಚ್ ಹಾಕಿದ್ದಾನೆ.. ಹಾಗೇಯೇ ಏಪ್ರಿಲ್ 13 ರಂದು ಸಹಚರರನ್ನುಕರೆಸಿ ಗೌತಮ್ ಕಾಲೋನಿಯ ಸುರೇಶ್ ನಿವಾಸಕ್ಕೆ ಹೋಗಿ ಸಿನಿಮೀಯ ಶೈಲಿಯಲ್ಲಿ ಕೈಕಾಲು ಬಿಗಿದು ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ರು..l
ಬಾಬು ಅಲಿಯಾಸ್ ನರ್ಸ್ ಬಾಬು ಸುರೇಶ್ ನ ಕೊಲೆಗೆ ಸ್ಕೆಚ್ ಹಾಕುವಾಗಲೇ ಪ್ಲಾನ್ ಮಾಡಿದ್ದ. ಫಿಂಗರ್ ಪ್ರಿಂಟ್ ಬೀಳಬಾರದು ಅಂತ ಸಹಚರರ ಕೈಗೆ ಗ್ಲೌಸ್ ಕೊಟ್ಟಿದ್ದ.ಕೊಲೆಯ ಬಳಿಕ ಡಾಗ್ ಸ್ಕ್ವಾಡ್ ಗೂ ಸುಳಿವು ಸಿಗಬಾರದು ಅಂತ ಬಾಡಿ ಮತ್ತು ಮನೆಯಲ್ಲಿ ಕಾರದ ಪುಡಿ ಎರಚಿಸಿದ್ದ.. ಮೊಬೈಲ್ ನೆಟ್ವರ್ ನಲ್ಲಿಸಿಕ್ಕಿಬೀಳಬಹುದು ಅಂತ ಇಂದಿರಾನಗರದ ದೊಡ್ಡ ಮೋರಿಯಲ್ಲಿ ಮೊಬೈಲ್ ಎಸೆದಿದ್ದ..ಆದ್ರೂ ಹಲಸೂರು ಇನ್ಸ್ ಪೆಕ್ಟರ್ ಮಂಜುನಾಥ್ ಚಾಣಾಕ್ಷತನದಿಂದ ಬಾಬು ಅಲಿಯಾಸ್ ನರ್ಸ್ , ಬಾಬು ಅಣ್ಣ ಮುರಳಿ, ಗಜೇಂದ್ರ ನಾಯಕ್, ದೇವೇಂದ್ರ ನಾಯಕ್,ರಾಜೇಂದ್ರ ನಾಯಕ್ ಸೇರಿ ಐವರು ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಸದ್ಯ ಹಲಸೂರು ಪೊಲೀಸ್ರು ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.. ಆದ್ರೆ ಹಣದ ಆಸೆಗೆ ಎಷ್ಟೇ ಸ್ಕೆಚ್ ಹಾಕಿ ಕೊಲೆ ಮಾಡಿದ್ರು ಪೊಲೀಸ್ರು ಸಣ್ಣ ಸುಳಿವು ಹಿಡಿದು ಬಂಧಿಸದೆ ಬಿಡಲ್ಲ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
15/04/2022 06:03 pm