ಬೆಂಗಳೂರು: ಬೆಂಗಳೂರಿನಲ್ಲಿ ಜನರು ಮೋಸ ಹೋಗುವುದು ಕಾಮನ್. ಆದರೆ, ನಾವು ಇಂದು ತೋರಿಸುವ ಮೋಸ ಮಾಡುವವರ ಸ್ಟೈಲೇ ಬೇರೆಯಾಗಿದೆ. ನೀವು ಏನಾದರೂ OYE space ಮೂಲಕ ಮನೆಗಳನ್ನು ಬಾಡಿಗೆ ಅಥವಾ ಲೀಸ್ ಗೆ ಪಡೆದಿದ್ರೇ ಹುಷಾರಾಗಿರಿ. ಏಕೆಂದರೆ OYE space ಮೂಲಕ ಮನೆಗಳನ್ನು ಲೀಸ್ ಪಡೆದಿದ್ದ ಜನರು ನ್ಯಾಯಕ್ಕಾಗಿ ಪೊಲೀಸರ ಹಿಂದೆ ಬಿದ್ದಿದ್ದಾರೆ.
ವಿಷಯಕ್ಕೆ ಬಂದರೆ ಎಲೆಕ್ಟ್ರಾನಿಕ್ ಸಿಟಿ ಬಳಿ OYE space ಎಂಬ ರಿಯಲ್ ಎಸ್ಟೇಟ್ ಆಫೀಸ್ ಇದೆ. ಈ ಆಫೀಸ್ ನಲ್ಲಿ ಜನರಿಗೆ ಬೇಕಾದ ಮನೆಗಳು ಅಥವಾ ಸೈಟ್ ಗಳು ಬಾಡಿಗೆ ಅಥವಾ ಲೀಸ್ ಗೆ ನೀಡಲಾಗುತ್ತಿದೆ. ಅಲ್ಲಿಂದ ನಿಮಗೆ ತೊಂದರೆ ಶುರು. ಯಾವಾಗ ಮನೆ ಬಾಡಿಗೆ ಬರುವುದಿಲ್ವೋ ಆಗ ಮನೆ ಮಾಲೀಕರು ಕಂಗಾಲಾಗಿ OYE ಸ್ಪೇಸ್ ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಆಗ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಕಾಲ್ ಮಾಡಿದ್ರೇ ನೋ ರೆಸ್ಪಾನ್ಸ್. ಹೀಗಾಗಿ ಮನೆ ಮಾಲೀಕರು ಬಾಡಿಗೆ ನೀಡಿ ಅಥವಾ ಮನೆ ಖಾಲಿ ಮಾಡಿ ಎಂದು ಬಾಡಿಗೆದಾರರನ್ನು ಒತ್ತಾಯಿಸುತ್ತಿದ್ದಾರೆ.
ಇತ್ತ ಮನೆಗೆ ಅಡ್ವಾನ್ಸ್ ಪಡೆದ OYE space ನವರು ಲಕ್ಷಾಂತರ ರೂ. ಲೀಸ್ ಅಮೌಂಟ್ ಪಡೆದು ನಾಪತ್ತೆ ಆಗಿದ್ದಾರೆ. ಹೀಗಾಗಿ ಮನೆಯಲ್ಲಿ ಇದ್ದ ಬಾಡಿಗೆದಾರರಿಗೆ ಇತ್ತ ಅಡ್ವಾನ್ಸ್ ದುಡ್ಡೂ ಇಲ್ಲ, ಅತ್ತ ಬಾಡಿಗೆ ಮನೆ ಇಲ್ಲದಂತಾಗಿದೆ. ಒಟ್ಟಿನಲ್ಲಿ OYE space ನವರು ಬೆಂಗಳೂರಿನಾದ್ಯಂತ ನೂರಾರು ಜನರಿಂದ ಸಾವಿರಾರು, ಲಕ್ಷಾಂತರ ರೂ. ನಂತೆ ಕೋಟಿ ಕೋಟಿ ಹಣ ಪಡೆದು ಪರಾರಿಯಾಗಿ ಎಲ್ಲೋ ಎಂಜಾಯ್ ಮಾಡ್ತಿದ್ದಾರೆ.
-ನವೀನ್, ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
01/04/2022 07:09 pm