ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯುವತಿ ಮೇಲೆ ಗ್ಯಾಂಗ್ ರೇಪ್; ದೆಹಲಿ ಮೂಲದ ನಾಲ್ವರು ಆರೋಪಿಗಳ ಅರೆಸ್ಟ್

ಬೆಂಗಳೂರು: ರಾಜಧಾನಿಯಲ್ಲಿ ಪಶ್ಚಿಮ ಬಂಗಾಳ‌ ಮೂಲದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿರೋ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ‌‌ ದೆಹಲಿ ಮೂಲದ ನಾಲ್ವರು ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ನಗರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ರಜತ್, ಶಿವರಾಣ್, ದೇವ್ ಸರೋಯಿ ಹಾಗೂ ಯೊಗೇಶ್ ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ದೆಹಲಿ ಮೂಲದವರಾಗಿದ್ದು ರಾಷ್ಟ್ರೀಯ ಮಟ್ಟದ ಈಜುಗಾರರಾಗಿ ಗುರುತಿಸಿಕೊಂಡಿದ್ದಾರೆ. ಆರೋಪಿಗಳ‌ ಪೈಕಿ ರಜತ್ ಡೇಟಿಂಗ್ ಆ್ಯಪ್ ಮೂಲಕ ಯುವತಿಯನ್ನ ಪರಿಚಯಿಸಿಕೊಂಡಿದ್ದ.‌ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು‌‌.‌ ಸಲುಗೆ ಹೆಚ್ಚಾದ ಹಿನ್ನೆಲೆ ಇದೇ‌ ತಿಂಗಳು 24ರಂದು ಯುವತಿಯನ್ನ ರಜತ್ ಮನೆಗೆ ಆಹ್ವಾನಿಸಿದ್ದ. ಆರೋಪಿಯ ಸ್ನೇಹಿತರೆಲ್ಲರೂ ಯುವತಿಯೊಂದಿಗೆ ಪಾರ್ಟಿ ಮಾಡಿದ್ದಾರೆ. ತಡರಾತ್ರಿಯಾಗಿದ್ದ ರಜತ್ ರೂಮಿನಲ್ಲಿ ಯುವತಿ ಉಳಿದುಕೊಂಡಿದ್ದಳು. ಈ ವೇಳೆ‌ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ರು ಎಂದು ಯುವತಿ ಆರೋಪಿಸಿ ದೂರು ನೀಡಿದ್ದಾಳೆ.

Edited By : Manjunath H D
PublicNext

PublicNext

29/03/2022 09:15 pm

Cinque Terre

32.84 K

Cinque Terre

2

ಸಂಬಂಧಿತ ಸುದ್ದಿ