ಬೆಂಗಳೂರು: ರಾತ್ರಿ ವೇಳೆ ಮನೆಗಳಿಗೆ ಎಂಟ್ರಿ ಕೊಟ್ಟು ಬೈಕ್ ಕಳ್ಳತನ ಮಾಡುತಿದ್ದ ಗ್ಯಾಂಗ್‌ವೊಂದನ್ನು ಬಂಧಿಸುವಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸರು ಯಾಶ್ವಸಿಯಾಗಿದ್ದಾರೆ.
ಆನಂದ್(29), ಮಹಾಲಿಂಗಯ್ಯ (27), ಚಿತ್ತಯ್ಯ (26) ಬಂಧಿತ ಆರೋಪಿಗಳು. ಮೂಲತಃ ತುಮಕೂರಿನವರಾದ ಆರೋಪಿಗಳು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ರಾತ್ರಿ ವೇಳೆಯಲ್ಲಿ ಏರಿಯಾಗಳಲ್ಲಿ ಬೀಟ್ ಹಾಕುತ್ತಿದ್ದ ವೇಳೆ ಸಿಕ್ಕ ಸಿಕ್ಕ ಬೈಕ್ ಕದ್ದು ಎಸ್ಕೇಪ್ ಆಗುತ್ತಿದ್ದರು. ಒಬ್ಬೊಬ್ಬರೂ ಒಂದೊಂದು ಕಂಪನಿಯ ಬೈಕ್ ಕದಿಯುವಲ್ಲಿ ನಿಪುಣರಾಗಿದ್ದ ಆರೋಪಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಅಷ್ಟೇ ಅಲ್ಲದೆ ತಮ್ಮ ಫೇವರೇಟ್ ಬೈಕ್ ಕಂಡ ಕೂಡಲೇ ಬೈಕ್ ಕದಿಯುತ್ತಿದ್ದ ಈ ಕಿಲಾಡಿ ಗ್ಯಾಂಗ್ ವೈಟ್ ಫೀಲ್ಡ್, ಹೆಚ್‌ಎಎಲ್, ಮಹದೇವಪುರ, ಮಾರತ್ ಹಳ್ಳಿ ಸೇರಿದಂತೆ 7 ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಕದ್ದ ಬೈಕ್‌ಗಳನ್ನು ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದರು. ವೈಟ್ ಫೀಲ್ಡ್ ಪೊಲೀಸರ ಕಾರ್ಯಾಚರಣೆಯಿಂದ ಆರೋಪಿಗಳ ಬಂಧನವಾಗಿದ್ದು, ಆರೋಪಿಗಳಿಂದ 50 ಲಕ್ಷ ರೂ. ಮೌಲ್ಯದ 39 ದ್ವಿಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
PublicNext
23/03/2022 10:14 pm