ಇದು ನೈಸ್ ರಸ್ತೆ ಆದ್ರೆ, ಬೆಳಿಗ್ಗೆ ಮತ್ತು ಸಂಜೆಯಾದ್ರೆ ಸಾಕು ಈ ರಸ್ತೆ ಪಾರ್ಕ್ ಆಗಿ ಕನ್ವರ್ಟ್ ಆಗುತ್ತೆ.ಯಾಕಂದ್ರೆ ದೃಷ್ಯದಲ್ಲಿ ಕಾಣ್ತಿರುವ ಈ ರಸ್ತೆ ನೈಸ್ ರಸ್ತೆಯ ಕೊನೆಯ ಜಾಗ, ಇಲ್ಲಿ ಹಲವಾರು ಹಳ್ಳಿಗಳಿಗೆ ಹೋಗಲು ರಸ್ತೆ ಇದೆ. ಸುತ್ತಾ- ಮುತ್ತಾ ಕಾಡಿನಿಂದ ಕೂಡಿದೆ ಇದನ್ನು ಅಡ್ವಂಟೇಂಜ್ ಆಗಿ ತೆಗೆದುಕೊಂಡ ಪ್ರಣಯ ಪಕ್ಷಿಗಳು ಟೈಂ ಪಾಸ್ ಅಡ್ಡೆಯಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ.
ಹೌದು ಪ್ರಶಾಂತವಾದ ಈ ಜಾಗದಲ್ಲಿ ಕೂತು ಪ್ರೇಮಿಗಳು ಮೈ ಮರೆಯುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿದೆ. ಇದರಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಇದನ್ನೇ ಬೆನಿಫಿಟ್ ಮಾಡ್ಕೊಂಡು ಗ್ಯಾಂಗ್ ಕಟ್ಟಿಕೊಂಡು ಅಟ್ಯಾಕ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ಹೆದರಿಸಿ ಲೂಟಿ ಮಾಡುವುದರ ಜತೆಗೆ ಈ ರಸ್ತೆಯಲ್ಲಿ ಓಡಾಡುವ ಸ್ಥಳೀಯರ ಬಳಿಯೂ ಕೂಡ ರಾಬರಿ ಮಾಡ್ತಿದ್ದಾರೆ.
ಇಲ್ಲಿನ ಬೀಟ್ ಪೊಲೀಸ್ ಮೈನ್ ರೋಡಿನಲ್ಲಿ ಬಂದು ಹಾಗೆ ಹೋಗ್ತಾರೆ. ಹೆಚ್ಚಾಗಿ ಈ ರಸ್ತೆ ಕಡೆ ಬರದೇ ಇರುವುದರಿಂದ ದರೋಡೆಕೋರರ ಕಾಟ ಜಾಸ್ತಿ ಆಗ್ತಾ ಇದೆ. ಇದೆಕೆಲ್ಲಾಯಾವಾಗ ಕಡಿವಾಣ ಬೀಳುತ್ತೆ ಇದೆಲ್ಲಾ ಪೊಲೀಸರ ಕಣ್ಣಿಗೆ ಬೀಳ್ತಾ ಇಲ್ವಾ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.
PublicNext
14/03/2022 07:14 pm