ಬೆಂಗಳೂರು: ವೃದ್ಧ ದಂಪತಿಗೆ ಚಾಕುವಿನಿಂದ ಇರಿದು ರಾಬರಿಗೆ ಯತ್ನಿಸಿರೋ ಘಟನೆ ಸಿ.ಕೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೃದ್ಧೆ ಮೈಮೇಲಿದ್ದ ಚಿನ್ನಾಭರಣಕ್ಕಾಗಿ ಪರಿಚಯಸ್ಥನೇ ಕೃತ್ಯ ನಡೆಸಿದ್ದಾನೆ. ಲಕ್ಷ್ಮೀ ಮತ್ತು ರಾಮಾನುಜಚಾರ್ಯ ಗಾಯಗೊಂಡ ವೃದ್ಧ ದಂಪತಿಯಾಗಿದ್ದು, ಆರೋಪಿ ಷಣ್ಮುಗ ಎಂಬಾತನಿಂದ ಕಳೆದ 50 ವರ್ಷಗಳಿಂದಲೂ ವೃದ್ಧ ದಂಪತಿಗೆ ಪರಿಚಯಸ್ಥನಾಗಿದ್ದ. ವೃದ್ಧೆ ಲಕ್ಷ್ಮಿ ತಂದೆ ಮನೆಯಲ್ಲಿ ಬಾಡಿಗೆಮನೆಯಲ್ಲಿದ್ದ ಆರೋಪಿ ಷಣ್ಮುಖ.
ನಿನ್ನೆ ವೃದ್ಧೆ ಮನೆಯಲ್ಲಿ ಇಲ್ಲದಿದ್ದಾಗ ಚಿನ್ನಾಭರಣ ದೋಚೊ ಪ್ಲಾನ್ ಮಾಡಿದ್ದ ಷಣ್ಮುಗ. ರಾಮಾನುಜ ಚಾರ್ಯ ಅಂಗಡಿಗೆ ಹೋದಾಗ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ. ಮನಸೋ ಇಚ್ಛೆ ವೃದ್ಧೆಗೆ ಮೂರ್ನಾಲ್ಕು ಬಾರಿ ಚಾಕುವಿನಿಂದ ಇರಿದು, ಚಿನ್ನಾಭರಣ ಕಿತ್ತು ಹೊರಬಂದಿದ್ದಾನೆ.
ಈ ವೇಳೆ ಅಂಗಡಿಯಿಂದ ಮರಳಿದ್ದ ರಾಮಾನುಜಚಾರ್ಯ ಅವರು ಷಣ್ಮುಗನನ್ನು ತಡೆಯಲು ಪ್ರಯತ್ನಿಸಿದಾಗ ಬೆನ್ನಿಗೆ ಡ್ರಾಗರ್ ನಿಂದ ಇರಿದಿದ್ದಾನೆ. ಬಳಿಕ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ವೃದ್ಧ ದಂಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿ.ಕೆ ಅಚ್ಚುಕಟ್ಟು ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.
Kshetra Samachara
14/03/2022 02:50 pm