ಬೆಂಗಳೂರು: ಅಪ್ಪಿತಪ್ಪಿ ಕಳ್ಳರು ಮನೆಗೆ ನುಗ್ಗಿದ್ರೆ ಗುಡಿಸಿ ಗುಂಡಾಂತರಮಾಡೋದು ವಾಡಿಕೆ. ಆದರೆ ಇಲ್ಲೊಬ್ಬ ಕಳ್ಳ ಫುಲ್ ಡಿಫರೆಂಟ್. ಲಾಕ್ ಮುರಿಯಲ್ಲ, ಕನ್ನ ಹಾಕಲ್ಲ, ಮನೆಗೆ ನುಗ್ಗಿದ್ರು ಒಡವೆ ಹಣ ಮುಟ್ಟದೆ ಕೇವಲ ಮೊಬೈಲ್ ಮತ್ತು ಲ್ಯಾಪ್ ಟಾಪ್ ಮಾತ್ರ ಎಸ್ಕೇಪ್ ಕದ್ದು.
ಮೊಬೈಲ್, ಲ್ಯಾಪ್ ಟಾಪ್ ಅನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಐನಾತಿ ಕಳ್ಳನನ್ನ, ಬೈಯ್ಯಪ್ಪನ ಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ.ನಾಗಲ್ಯಾಂಡ್ ಮೂಲದ ತ್ಯಾಂಗ್ ಸೈನ್ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಸುಮಾರು 9 ಲಕ್ಷ ಮೌಲ್ಯದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಗಳನ್ನ ಸೀಜ್ ಮಾಡಿದ್ದಾರೆ.
ಆರೋಪಿ ಪಿಜಿ ಮತ್ತು ಮನೆಗಳನ್ನು ಟಾರ್ಗೆಟ್ ಮಾಡಿ ಕಿಟಕಿ ಪಕ್ಕ ಚಾರ್ಜ್ ಗಿಟ್ಟ ಮೊಬೈಲ್ ಕದಿಯುತ್ತಿದ್ದ. ಓಪನ್ ಇರುವ ಮನೆಗಳಿಗೂ ನುಗ್ಗಿ ಲ್ಯಾಪ್ ಟಾಪ್ ಎಗರುಸುತ್ತಿದ್ದ. ಮೋಬೈಲ್ ಮತ್ತು ಲ್ಯಾಪ್ ಟಾಪ್ ಅನ್ನ ಸೆಕೆಂಡ್ ಹ್ಯಾಂಡ್‌ನಲ್ಲಿ ಆರಾಮಾಗಿ ಸೇಲ್ ಮಾಡಬಹುದು ಅನ್ನೋ ಉದ್ದೇಶದಿಂದಲೇ ಇವುಗಳನ್ನೇ ಟಾರ್ಗೆಟ್ ಮಾಡುತ್ತಿದ್ದೆ ಎಂದು ವಿಚಾರಣೆ ವೇಲೆ ಬಾಯಿ ಬಿಟ್ಟಿದ್ದಾನೆ.
Kshetra Samachara
07/03/2022 10:43 am