ಬೆಂಗಳೂರು: ಹಸುವಿನ ಮೇಲೆ ಕಾಮಾಂಧನೊಬ್ಬ ಮೃಗೀಯವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ! ದಾವಣಗೆರೆ ಮೂಲದ ತಿಂಡ್ಲು ನಿವಾಸಿ ವೆಂಕಟೇಶ್ ಕುಮಾರ್(22) ಎಂಬಾತನೇ ಈ ವಿಕೃತ ಕಾಮಿಯಾಗಿದ್ದು, ವಿದ್ಯಾರಣ್ಯಪುರ ಪೊಲೀಸರು ಇದೀಗ ಬಂಧಿಸಿ ಜೈಲಿಗಟ್ಟಿದ್ದಾರೆ.
ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ ಸಿಂಗಾಪುರದಲ್ಲಿ ಹನುಮಂತಪ್ಪ ಎಂಬವರು 5 ಹಸು, 6 ಕರುವಿನೊಂದಿಗೆ ಹಲವು ವರ್ಷಗಳಿಂದ ಹೈನುಗಾರಿಕೆ ಕಸುಬು ಮಾಡಿಕೊಂಡಿದ್ದರು. ಫೆ. 19ರಂದು ಮಧ್ಯರಾತ್ರಿ ಅಪರಿಚಿತನೊಬ್ಬ ಬಂದು ಹಸುಗಳಿಗೆ ತೊಂದರೆ ಕೊಡುತ್ತಾನೆ ಎಂದು ನೆರೆಹೊರೆಯವರು ದೂರಿದ್ದರು. ಇದರಿಂದ ಎಚ್ಚೆತ್ತ ಹನುಮಂತಪ್ಪ ಫೆ. 20ರಂದು ರಾತ್ರಿ ಆಗಂತುಕನ ಪತ್ತೆಗಾಗಿ ಹೊಂಚು ಹಾಕಿದ್ದರು.
ಅಂದುಕೊಂಡಂತೆ ಮಧ್ಯರಾತ್ರಿ ವ್ಯಕ್ತಿಯೊಬ್ಬ, ಹಟ್ಟಿಗೆ ಬಂದು ಹಸುವಿನ ಮೇಲೆ ಲೈಂಗಿಕ ಕ್ರಿಯಾ ನಿರತನಾಗುತ್ತಾನೆ! ಹನುಮಂತಪ್ಪ ಧಾವಿಸಿ ಬಂದು ನೋಡಿದಾಗ ಆ ವ್ಯಕ್ತಿ ಅದೇ ಏರಿಯಾದ ಯುವಕ ವೆಂಕಟೇಶ್(22) ಎಂಬುದು ಗೊತ್ತಾಗಿದೆ. ಹನುಮಂತಪ್ಪ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಐಪಿಸಿ 377 ಹಾಗೂ ಅನಿಮಲ್ ಆ್ಯಕ್ಟ್ ನಡಿ ಕೇಸ್ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Kshetra Samachara
24/02/2022 06:23 pm