ಬೆಂಗಳೂರು: ಫುಡ್ ಡೆಲಿವರಿ ಬಾಯ್ನನ್ನು ಅಡ್ಡಗಟ್ಟಿ ಲಾಂಗ್ ತೋರಿಸಿ ರಾಬರಿ ಮಾಡಿರೋ ಘಟನೆ ನಗರದ ದೇವರ ಜೀವನಹಳ್ಳಿಯಲ್ಲಿ ನಡೆದಿದೆ.
ಬೈಕ್ನಲ್ಲಿ ಫುಡ್ ಡೆಲಿವರಿ ಕೊಡಲು ಹೋಗ್ತಿದ್ದ ರಾಜು ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದು, ನಡುರಾತ್ರಿ ರಸ್ತೆ ಮಧ್ಯೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದಾರೆ. ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ರಾಜು, ದುಷ್ಕರ್ಮಿಗಳ ಬಳಿ ಬೈಕ್ ತೆಗೆದು ಹೋಗದಂತೆ ಬೇಡಿಕೊಂಡಿದ್ರು ಬಿಡದೆ ದುಷ್ಕರ್ಮಿಗಳು ಬೈಕ್ ನ ಕಸಿದು ಪರಾರಿಯಾಗಿದ್ದಾರೆ.ಬೈಕ್ ಜೊತೆಗೆ ರಾಜು ಬಳಿ ಇದ್ದ ಮೊಬೈಲ್ ಹಣವನ್ನು ಕಿತ್ತು ಎಸ್ಕೇಪ್ ಆಗಿದ್ದಾರೆ.
ಸದ್ಯ ಘಟನೆ ಸಂಬಂಧ ಡಿಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ರಾಬರಿ ಮಾಡಿದ್ದ ಇಬ್ಬರು ಆರೋಪಿಗಳನ್ನು ಡಿಜೆ ಪೊಲೀಸ್ರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
PublicNext
17/02/2022 09:36 pm