ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಕೊಳ್ಳಿ ದೆವ್ವವಾಗಿ ಕಾಡಿದ ಕಳ್ಳ ಅಂದರ್-ನಿಟ್ಟುಸಿರು ಬಿಟ್ಟ ಗ್ರಾಮಸ್ಥರು !

ನೆಲಮಂಗಲ: ಆತ ಮಲಗುವ ಮುನ್ನ ಊರಿನ ಜನ ಮಲಗಿದ್ರೆ, ಕಥೆ ಮುಗಿತು ಅಂತಲೇ ಅರ್ಥ. ಆತ ಊರಲ್ಲಿದ್ದ ಅಂದ್ರೆ ಮಹಿಳೆಯರಂತು ಆಚೆ ಬರೋಕೆ ಹೆದರುತ್ತಿದ್ರು. ಒಂದು ವೇಳೆ‌ ಧೈರ್ಯ ಮಾಡಿ ಮನೆಯಿಂದಾಚೆ ಬಂದ್ರೆ, ಊರಲ್ಲಿ ಕೊಳ್ಳಿ ದೆವ್ವ ಕಾಣಿಸಿಕೊಳ್ತಿತ್ತು.

ಇದೇನಪ್ಪಾ ಕೊಳ್ಳಿ ದೆವ್ವ, ಅಂತ ಹೇಳಿ ಯಾವನೋ ಡಿಂಗರ್ ಬಿಲ್ಲಿನ ಫೋಟೋ ತೋರಿಸ್ತಿದ್ದೀವಿ ಅಂದ್ಕೊಂಡ್ರಾ.ಹೌದು ಈ ಡಿಂಗರ್ ಬಿಲ್ಲಿನೇ ಕೊಳ್ಳಿ ದೆವ್ವದ ಕಥೆ ಕಟ್ಟಿದ ಭೂಪ. ಊರಿನವರಿಗೆಲ್ಲಾ ಮಂಕುಬೂದಿ ಎರಚುತ್ತಿದ್ದ ಐನಾತಿ ಆಸಾಮಿ.ರಾತ್ರಿ ಆಗ್ತಿದ್ದಂತೆ ಕೊಳ್ಳಿ ದೆವ್ವವಾಗಿ ಕಂಡ ಕಂಡವರ ಮನೆ ಹಿತ್ತಲಲ್ಲಿರೋ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ಸೈಲೆಂಟ್ಟಾಗಿ ಮನೆ ಸೇರಿಕೊಳ್ತಿದ್ದ. ಅಸಲಿಗೆ ಈ ಘಟನೆ ನೆಡದದ್ದು ನೆಲಮಂಗಲ ತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿ.

ಈ ಫೋಟೋದಲ್ಲಿ ಕಾಣ್ತಿರೋ ಡಿಂಗರ್ ಬಿಲ್ಲಿ ಹೆಸ್ರು ರುದ್ರೇಶ್ ಅಂತ, ಇವನು ಒಂದ್ಸಾರಿ ಕಣ್ಣಾಕಿದ್ರೆ ಮುಗಿತು ಅಂತಲೇ ಅರ್ಥ. ಇದಕ್ಕೆ ಉದಾಹರಣೆ ರಾತ್ರಿ ಗ್ರಾಮದ ಬಸವರಾಜು ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ತಗ್ಲಾಕೊಂಡಿದ್ದು. ಹೀಗೆ ಹುಲ್ಲಿನ ಬಣವೆಗೆ ಹತ್ತಿದ್ದ ಬೆಂಕಿಯನ್ನ ಆರಿಸುತ್ತಿರೋ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಈ ಊರಲ್ಲಿ ಇದೇ ಮೊದಲ ಕೇಸ್ ಏನಲ್ಲ. ಈ ಹಿಂದೆ ಕೂಡ ಇದೇ ಊರಿನ ಮಹದೇವ್, ನಂಜುಂಡಯ್ಯ, ರಂಗಸ್ವಾಮಿ ಸೇರಿದಂತೆ ಹಲವರ ಬಣವೆಗೆ ಬೆಂಕಿ ಹಚ್ಚ ಎಸ್ಕೇಪ್ ಆಗಿದ್ನಂತೆ.

ಕುಡಿತ ಚಟ ಅಂಟಿಸಿಕೊಂಡಿದ್ದ ರುದ್ರೇಶ, ಮನೆಗಳ್ಳತನ, ಸರಗಳ್ಳತನ, ಸಿಕ್ಕಸಿಕ್ಕವರ ಮೊಬೈಲ್ ಎಗರಿಸೋದು ಇವನ ಚಾಳಿ. ಇದ್ರಿಂದ ಬೇಸತ್ತು ತಾಯಿ, ಹೆಂಡತಿ ಮಕ್ಕಳು ಕೂಡ ದೂರಾಗಿದ್ರು. ಆರೋಪಿ ರುದ್ರೇಶ್ ಊರಿನಲ್ಲಿದ್ದಾಗ ಮಹಿಳೆಯರು ಆಭರಣ ಧರಿಸಿ, ಹೊರಗೆ ಬರಲು ಹೆದರುತ್ತಾರಂತೆ.

ಈತನನ್ನ ಪೊಲೀಸರು ಈ ಹಿಂದೆ ಬಂಧಿಸಿದ್ದಾಗ, ಸರ್ ನನಗೆ ಹುಷಾರಿಲ್ಲ, ನಾನು ಸತ್ರೆ ನಿಮ್ಮ ತಲೆ ಮೇಲೆ ಬರುತ್ತೆ, ಮುಟ್ಟಿದ್ರೆ ಇನ್ನೇನೂ ಸತ್ತೋದಂತೆ ನಟಿಸುತ್ತಿದ್ನಂತೆ. ಪೊಲೀಸ್ರು ಈತನಿಗೆ ಮೆಡಿಕಲ್ ಚೆಕಪ್ ಮಾಡಿಸೋಕೆ ಅಂತ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ್ರೆ, ಚೆಕಪ್ ಮಾಡುತ್ತಿದ್ದ ವ್ಯೆದ್ಯೆ ಶ್ವೇತಾ ಅವರ ಬೆಲೆ ಬಾಳುವ ಮೊಬೈಲ್ ಫೋನ್‌ನನ್ನೇ ಎಗರಿಸಿದ್ನಂತೆ. ಕೂಡಲೇ ಎಚ್ಚೇತ್ತು ಚೆಕ್ ಮಾಡಿದ್ರೆ ಮೊಬೈಲ್ ಜೇಬಿನಲ್ಲಿ ಇಟ್ಟುಕೊಂಡದ್ದು ಪತ್ತೆಯಾಗಿದೆ.

ಸದ್ಯ ಊರಿನ ಜನ್ರಿಗೆ ಕೊಳ್ಳಿ ದೆವ್ವದಂತೆ ಕಾಟ ಕೊಡ್ತಿದ್ದ ಈ ರುದ್ರೇಶನನ್ನ ದಾಬಸ್‌ಪೇಟೆ ಠಾಣಾ ಪೊಲೀಸ್ರು ಬಂಧಿಸಿದ್ರಿಂದ, ಸದ್ಯ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಂತಾಗಿದೆ..

Edited By : Nagesh Gaonkar
PublicNext

PublicNext

16/02/2022 09:40 am

Cinque Terre

30.52 K

Cinque Terre

0

ಸಂಬಂಧಿತ ಸುದ್ದಿ