ಯಲಹಂಕ: ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿ ಪ್ರತಿಷ್ಠಿತ IBM ಕಂಪನಿ ಕಾರ್ಯನಿರ್ವಹಿಸ್ತಿದೆ. ಈ ಕಂಪನಿಯಲ್ಲಿ H.R. ಪೋಸ್ಟ್ ಖಾಲಿ ಇದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜಾಹೀರಾತು ಹಾಕಲಾಗಿತ್ತು. ಇದನ್ನು ನಂಬಿದ ಉದ್ಯೋಗಾಕಾಂಕ್ಷಿಗಳು ಲಕ್ಷಾಂತರ ಹಣ ಪಾವತಿಸಿ ಕೆಲಸಕ್ಕೆ ಹೋಗಿ IBM ಕಚೇರಿಲಿ ವಿಚಾರಿಸಿದಾಗ ಮೋಸ ಹೋಗಿರುವ ದೊಡ್ಡ ದಂಧೆಯ ಕರಾಳಮುಖ ಬೆಳಕಿಗೆ ಬಂದಿದೆ!
IBM ಸೇರಿದಂತೆ ನೌಕ್ರಿ ಡಾಟ್ ಕಾಮ್ ಮೊದಲಾದ ಕೆಲಸ ನೀಡುವ ಕಂಪನಿಗಳ ಲೆಟರ್ ಹೆಡ್ , ನಕಲಿ ಸೀಲ್ ಬಳಸಿ ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಗಾಳ ಹಾಕಲಾಗುತ್ತಿತ್ತು. ವಂಚಕರ ಜಾಲವು ನಕಲಿ ಕೆಲಸದ Offer Letter ಕೊಟ್ಟು Online ಮೂಲಕ ಹಣ ಹಾಕಿಸಿಕೊಂಡು ಮೋಸ ಮಾಡುತ್ತಿದ್ದರು. ಉದ್ಯೋಗ ಅರಸಿ ಬರುವ, ಮೋಸ ಹೋದವರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ IBM ಕಂಪನಿಯ H.R. ಸಂಪಿಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಖದೀಮರ ಹೆಡೆಮುರಿ ಕಟ್ಟಿದ್ದಾರೆ. ಉತ್ತರ ಭಾರತ ಮೂಲದ ಕಾಳಿಪ್ರಸಾದ್, ಅಭಿಷೇಕ್ ಮೊಹಾಂತಿ, ಅಭಿಜಿತ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
Kshetra Samachara
15/02/2022 04:46 pm