ನೆಲಮಂಗಲ : ಹಣ ಕೊಟ್ಟ ಯುವನನೋರ್ವನಿಗೆ ಹಣ ಪಡೆದ ವ್ಯಕ್ತಿ ಹಲ್ಲೆ ಮಾಡಿ ಸದ್ಯ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಬೆಂ.ಉತ್ತರ ತಾಲ್ಲೂಕು ದೇವಣ್ಣನ ಪಾಳ್ಯ ಪೆಟ್ರೋಲ್ ಬಂಕ್ ಬಳಿ ಫೆ. 10 ರಂದು ನಡೆದಿದೆ.ಇನ್ನು ಹಣ ಕೊಟ್ಟ ಯುವಕ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಈ ಸಂದರ್ಭದಲ್ಲಿ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ.
ಗ್ರಾಮದ ಸಂತೋಷ್ ಎಂಬುವವನು 28 ವರ್ಷದ ಮಂಜುನಾಥ್ ಗೆ ಬೈಕ್ ನಲ್ಲಿ ಡಿಕ್ಕಿ ಹೊಡೆದು ಕುತ್ತಿಗೆ ಭಾಗಕ್ಕೆ ಹಲ್ಲೆ ನೆಡೆಸಿದ್ದ. ಸದ್ಯ ಹಲ್ಲೆ ನಡೆಸಿದ ಸಂತೋಷ ತಲೆಮರೆಸಿಕೊಂಡಿದ್ದು, ಪೊಲೀಸ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
14/02/2022 10:55 pm