ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ : ವ್ಯವಹಾರದ ಕಿರಿಕ್ : ರಾಡ್, ಚಾಕುವಿನಿಂದ ಬಡಿದಾಡಿಕೊಂಡ ಸ್ನೇಹಿತರು

ನೆಲಮಂಗಲ : ವ್ಯವಹಾರದ ವಿಚಾರಕ್ಕೆ ಕೈಕೈ ಮಿಲಾಸಿದ ಸ್ನೇಹಿತರು ಪರಸ್ಪರ ರಾಡ್, ಚಾಕುವಿನಿಂದ ಹೊಡೆದಾಡಿಕೊಂಡು ಆಸ್ಪತ್ರೆ ಪಾಲಾದ ಘಟನೆ ನೆಲಮಂಗಲದ ಮಲ್ಲರ ಬಾಣವಾಡಿ ಗೇಟ್ ಬಳಿ ನಡೆದಿದೆ.

ಕುಣಿಗಲ್ ರಸ್ತೆಯ ಲ್ಯಾಂಕೋ ಟೋಲ್ ಬಳಿ ಪ್ರಿಯಾ ಕಾಂಡಿಮೆಂಟ್ಸ್ ಮಾಲೀಕ ಲೋಕೇಶ್, ಇಸ್ಲಾಂಪುರದ ಅಬು @ ಇಲಿಯಾಜ್ ಪಾಷಾ, ಹೊಸಹಳ್ಳಿಯ ಲೋಕೇಶ್, ಕುಮಾರ್ ನಡುವೆ ಈ ಮಾರಾಮಾರಿ ನಡೆದಿದ್ದು ಗಾಯಗೊಂಡ ಮೂವರಿಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
Kshetra Samachara

Kshetra Samachara

12/02/2022 02:28 pm

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ