ಬೆಂಗಳೂರು: ಪರಪ್ಪನ ಆಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಕಾರಾಗೃಹಗಳ ಡಿಜಿಪಿ ಅಲೋಕ್ ಮೋಹನ್ ಪ್ರತಿಕ್ರಿಯಿಸಿದ್ದಾರೆ. ಗೃಹ ಸಚಿವರು ಈಗಾಗಲೇ ತನಿಖೆ ಸೂಚಿಸಿದ್ದಾರೆ.ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆ ಮಾಡಲಾಗುತ್ತೆ ಈ ಹಿಂದೆಯೂ ಸಹ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.
ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತೆ.ಕೇವಲ ಕೈದಿಗಳ ವಿರುದ್ಧ ಮಾತ್ರವಲ್ಲದೆ ಇದರಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೂ ಕೇಸ್ ಹಾಕಲಾಗುತ್ತದೆ. ಎಲ್ಲರ ಪಾತ್ರದ ಬಗ್ಗೆಯೂ ವಿಚಾರಣೆ ಮಾಡಲಾಗುತ್ತದೆ. ಜೈಲಿನ ಮ್ಯಾನ್ಯುಲ್ ಬದಲಾವಣೆಗೂ ತಯಾರಿ ನಡೆಯುತ್ತಿದೆ. ಅದಷ್ಟೂ ಬೇಗ ಮ್ಯಾನ್ಯುಲ್ ನಲ್ಲೂ ಬದಲಾವಣೆ ಮಾಡಲಾಗುವುದು ಎಂದು ಕಾರಾಗೃಹಗಳ ಡಿಜಿ ಅಲೋಕ್ ಮೋಹನ್ ತಿಳಿಸಿದ್ದಾರೆ.
PublicNext
25/01/2022 02:34 pm