ಬೆಂಗಳೂರು: ಕಳೆದ ವಾರ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಒಂದೇ ಒಂದು ಪಲ್ಸರ್ ಬೈಕ್ ಕಳವಾಗಿತ್ತು. ಈ ಬಗ್ಗೆ ಬೈಕ್ ಕಳೆದುಕೊಂಡ ಮಾಲೀಕ ಠಾಣೆಗೆ ಬಂದು ದೂರು ನೀಡಿದ್ದ. ಪೊಲೀಸ್ರು ಒಂದೇ ಒಂದು ಬೈಕ್ ತಾನೇ ಅಂತ ನೆಗ್ಲೆಟ್ ಮಾಡಿದ್ರೆ ಇವತ್ತುದೊಡ್ಡ ಬೈಕ್ ಕಳ್ಳರು ಪತ್ತೆ ಆಗ್ತಿರ್ಲಿಲ್ಲ!
ಎಸ್. ಬೈಕ್ ಕಳವಾಗಿದೆ ಅಂತ ಠಾಣೆಗೆ ದೂರು ಬಂದಿದ್ದೇ ತಡ, ಬ್ಯಾಟರಾಯನಪುರ ಇನ್ ಸ್ಪೆಕ್ಟರ್ ಶಂಕರ್ ನಾಯಕ್ ಅಲರ್ಟ್ ಆದ್ರು. ಮೊದಲಿಗೆ ಬೈಕ್ ಕಳವಿನ ಹಿಂದೆ ದೊಡ್ಡ ಜಾಲವೇ ಇದೆ ಅನ್ನೋದನ್ನು ಶಂಕಿಸಿದ್ರು. ಅದ್ರಂತೆ ಬೈಕ್ ಕಳವಾದ ಸುತ್ತಮುತ್ತಲಿನ ಸಿಸಿ ಟಿವಿ ಚೆಕ್ ಮಾಡಿಸಿದ್ರು. 200ಕ್ಕೂ ಹೆಚ್ಚು ಸಿಸಿ ಟಿವಿ ಪರಿಶೀಲಿಸಿ ಈಗ ಬೈಕ್ ಕಳ್ಳರ ಜಾಡು ಹಿಡಿದಿದ್ದಾರೆ.
ಇಷ್ಟಕ್ಕೂ ಇವರೆಲ್ಲ ಅಂತರ್ ಜಿಲ್ಲಾ ಬೈಕ್ ಕಳ್ಳರು. ಸದ್ಯ ಕಬೀರ್ , ಸಯ್ಯದ್, ಅಫ್ತರ್ ನನ್ನು ಬಂಧಿಸಿರೋ ಪೊಲೀಸ್ರು 25 ಬೈಕ್, 24 ಮೊಬೈಲ್ ಹಾಗೂ 30 ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ ಒಂದು ಆಟೋ ವಶಕ್ಕೆ ಪಡೆದಿದ್ದಾರೆ. ಬಂಧಿತರು ಮಂಗಳೂರು ಸೇರಿದಂತೆ ಬೆಂಗಳೂರಿನ ನಾನಾ ಠಾಣೆಗಳ ವ್ಯಾಪ್ತಿಯಲ್ಲಿ ಸುಲಿಗೆ, ದರೋಡೆ ಸಹಿತ ಹಲವು ಪ್ರಕರಣದಲ್ಲಿ ಆ್ಯಕ್ಟೀವ್ ಆಗಿದ್ರು ಅನ್ನೋದು ಗೊತ್ತಾಗಿದೆ.
PublicNext
24/01/2022 09:38 pm