ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷ ಲಕ್ಷ ವಂಚಿಸಿದ್ದ ಆರೋಪಿ ಅಂದರ್

ಯಲಹಂಕ:ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಜನರಿಗೆ ವಂಚಿಸುತ್ತಿದ್ದ ಮೋಸಾಗಾರನನ್ನು ಬೆಂಗಳೂರಿನ ಸಂಪಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪುಣೆ ಮೂಲದ ಸಂಜೀವ್ ಗಂಗಾರಾಮ್ ಗೂರ್ಖಾ ಬಂಧಿತ ಆರೋಪಿ.ಈತ ಜನರಿಗೆ ಮೋಸ ಮಾಡಲೆಂದೆ ಎಂಟು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದ.ಮೋಸ ಹೋದ ನಾಲ್ಕು ಜನರ ದೂರಿನನ್ವಯ ಸಂಪಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

OLX ನಲ್ಲಿ ಜಾಹಿರಾತು ಹಾಕಿ ಪ್ರಸಿದ್ಧ IMB ಕಂಪನಿಯಲ್ಲಿ ಕೆಲಸ ಇದೆ ಎಂದು ಜನರನ್ನು ನಂಬಿಸುತ್ತಿದ್ದ.ನಂಬಿದ ಜನರಿಗೆ ಮೊದಲು ನೀವು ಕಂಪ್ಯೂಟರ್ ಬಿಡಿ ಭಾಗಗಳನ್ನು ಖರೀದಿಸಿ, ಅದಕ್ಕಾಗಿ ಸ್ವಲ್ಪ ಹಣ ಡೆಪೋಸಿಟ್ ಮಾಡಬೇಕು ಎಂದು ನಂಬಿಸುತ್ತಿದ್ದ. ನಂಬಿದವರು ಇವರ ಖಾತೆಗೆ ಹಣ ಹಾಕಿ, ವಸ್ತು ಸರಬರಾಜು ಆಗದಿದ್ದಾಗ ತಾವು ಮೋಸ ಹೋಗಿರುವುದು ಗೊತ್ತಾಗ್ತಿತ್ತು. ಹೀಗೆ 40 ಕ್ಕೂ ಹೆಚ್ಚು ಜನ‌ ಈ ವಂಚಕ ಸಂಜೀವ್ ನಿಂದ ಮೋಸ ಹೋಗಿದ್ದಾರೆ.

ಈ ಬಗ್ಗೆ ಸಂಪಿಗೇಹಳ್ಳಿ ಪೊಲೀಸರು ಅನೇಕ ದೂರುಗಳನ್ವಯ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.ಇನ್ನು ಸಹ ಅನೇಕ ಜನ ಮೊಸ ಹೋಗಿರುವವರು ಇದ್ದಾರೆ. ಸಂಪಿಗೇಹಳ್ಳಿ ಪೊಲೀಸರಿಗೆ ಮತ್ತು ವಿವಿಧ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದಿದ್ದಾರೆ.

ವಂಚಕ ಸಂಜೀವ್ ಜೈಲಿನಲ್ಲಿ ಸದ್ಯ ಮುದ್ದೆ ಮುರಿತಿದ್ದಾನೆ.

Edited By :
Kshetra Samachara

Kshetra Samachara

24/01/2022 12:20 pm

Cinque Terre

248

Cinque Terre

0

ಸಂಬಂಧಿತ ಸುದ್ದಿ