ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼಕೆಲಸ ಆಮಿಷʼ ಒಡ್ಡಿ ಅತ್ಯಾಚಾರ, ಬ್ಲ್ಯಾಕ್‌ ಮೇಲ್; ಯುವತಿ ಆರೋಪ

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದವನ ಜೊತೆ ಕೆಲಸದ ವಿಚಾರದಲ್ಲಿ ಚರ್ಚೆ ಮಾಡಿದ್ದಳು. ಸರಿ, ಮಾತಾಡೋಣ ಬಾ ಎಂದು ಕರೆಸಿದ ಸ್ನೇಹಿತ ತನ್ನ ಕಾರಿನಲ್ಲೇ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿ ಠಾಣೆ ಮೆಟ್ಟಿಲೇರಿದ್ದಾಳೆ.

ಈತನ‌ ಹೆಸರು ಹರ್ಷ ಗೌಡ. ಸದ್ಯ ಈ ಹೈಫೈ ವ್ಯಕ್ತಿ ವಿರುದ್ದ ಅತ್ಯಾಚಾರ ಆರೋಪದ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂ. ಉತ್ತರ ತಾಲೂಕು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ 25ರ ಹರೆಯದ ಫ್ಯಾಷನ್ ಡಿಸೈನರ್ ಯುವತಿ ದೂರುದಾತೆ. ತನ್ನದೇ ಏರಿಯಾ ಬಳಿಯ ಯುವತಿಯನ್ನು 6-7 ವರ್ಷ ಹಿಂದೆ ಫೇಸ್‌‌ ಬುಕ್ ಮೂಲಕ ಸಂಪರ್ಕಿಸಿದ್ದ ಹರ್ಷ ಗೌಡ, ಜ. 16ರಂದು ತನ್ನ ಐಶಾರಾಮಿ ಕಾರಿನಲ್ಲಿ ಅತ್ಯಾಚಾರ ಎಸಗಿ, ವಿವಸ್ತ್ರ ವೀಡಿಯೊ ಚಿತ್ರೀಕರಿಸಿ, ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಸಂತ್ರಸ್ತೆಗೆ ಈತ ಫೇಸ್‌ ಬುಕ್‌ನಲ್ಲಿ ಪ್ರೀತಿಸುವಂತೆ ಪೀಡಿಸಿದ್ದನೆನ್ನಲಾಗಿದ್ದು, ಆದ್ರೆ ಆಕೆ ನನಗೆ ಇದೆಲ್ಲ ಇಷ್ಟ ಆಗೋದಿಲ್ಲ ಎಂದು ನಿರಾಕರಿಸಿದ್ದಾಳಂತೆ. ನಂತರ ಫ್ರೆಂಡ್‌ಶಿಪ್ ಬ್ರೇಕ್ ಆಗಿದೆ. ಆರೋಪಿಯ ತಂದೆ ಗಾರ್ಮೆಂಟ್ಸ್‌ಗಳಿಗೆ ಟ್ರಾನ್ಸ್‌ಪೋರ್ಟ್‌ ಸರ್ವಿಸ್ ನೀಡುವ ಹಿನ್ನೆಲೆ, ಕೆಲಸ ಕೇಳಲು ಮತ್ತೆ ಹರ್ಷನನ್ನು ಸಂಪರ್ಕಿಸಿದಾಗ ಮಾಕಳಿ ಬಳಿಯ ರೆಸ್ಟೋರೆಂಟ್‌ ಹತ್ತಿರ ಬರಲು ತಿಳಿಸಿದ್ದ.

ಹೀಗೆ ಬಂದಿದ್ದ ಯುವತಿಯನ್ನು ಕಾರಿನಲ್ಲೇ ವಿವಸ್ತ್ರಗೊಳಿಸಿ ಅತ್ಯಾಚಾರ ಎಸಗಿದ್ದಲ್ಲದೆ, ನಿನಗಾದ ರೀತಿ ನಿನ್ನ ಅಕ್ಕನಿಗೂ ಮಾಡುತ್ತೇನೆ. ನಿನ್ನ ಅಶ್ಲೀಲ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇನ್ನು, ಸಂತ್ರಸ್ತ ಯುವತಿ ದೂರು ನೀಡಲು ಹೋದಾಗ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ದೂರು ಪಡೆಯದೆ ಸತಾಯಿಸಿದ ಆರೋಪವೂ ಕೇಳಿ ಬಂದಿದೆ. 5 ದಿನಗಳ ನಂತರ ಕೇಸ್ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.‌

Edited By : Manjunath H D
PublicNext

PublicNext

22/01/2022 05:10 pm

Cinque Terre

36.5 K

Cinque Terre

0

ಸಂಬಂಧಿತ ಸುದ್ದಿ