ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೆಟ್ರೋ ಕಾರ್ಡ್ ನಲ್ಲಿರುವ ಹಣ ದಿಢೀರ್ ಮಾಯ!

ವಿಶೇಷ ವರದಿ : ಗಣೇಶ್ ಹೆಗಡೆ

ಬೆಂಗಳೂರು: ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿ 60 ದಿನದ ಒಳಗೆ ಒಂದು ಬಾರಿಯೂ ಪ್ರಯಾಣ ಮಾಡದಿದ್ದರೆ ಅಥವಾ 7 ದಿನಗಳ ಒಳಗೆ ಕಾರ್ಡ್ ಪ್ರವೇಶ ದ್ವಾರದಲ್ಲಿ‌ ಎಂಟ್ರಿ ಮಾಡಿಲ್ಲವಾದರೆ‌ ರಿಚಾರ್ಜ್ ಮಾಡಿದ ಪೂರ್ಣ ಹಣ ಕಡಿತ ಆಗುತ್ತದೆ.

ಬಿಎಂಆರ್‌ಸಿಎಲ್ ರೂಪಿಸಿರುವ ಈ ಅವೈಜ್ಞಾನಿಕ ಕ್ರಮಕ್ಕೆ ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹಣವಿದ್ದಾಗ ಕೆಲವರು 500 ಅಥವಾ 1000 ರೂ ರಿಚಾರ್ಜ್ ಮಾಡಿರುತ್ತಾರೆ. ಅನಿವಾರ್ಯ ಕಾರಣಗಳಿಂದಾಗಿ ಎರಡು ತಿಂಗಳು ಮೆಟ್ರೋದಲ್ಲಿ ಪ್ರಯಾಣ ಸಾಧ್ಯವಾಗುವುದಿಲ್ಲ. ಆದರೆ ಕಾರ್ಡ್ ನಲ್ಲಿ ಹಣ ಮಾತ್ರ ಮಾಯವಾಗುತ್ತದೆ. ಇದು ಸರಿಯಾದ ಕ್ರಮವಲ್ಲ ಎಂಬುದು ಪ್ರಯಾಣಿಕರ ವಾದವಾಗಿದೆ.

ಆದರೆ ಬಿಎಂಆರ್ ಸಿಎಲ್ ನಿಯಮದ ಪ್ರಕಾರ,ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿ 60 ದಿನದ ಒಳಗೆ ಒಂದು ಬಾರಿ ಆದರೂ ಪ್ರಯಾಣ ಮಾಡಲೇಬೇಕು. ಇಲ್ಲವಾದಲ್ಲಿ ನಿಮ್ಮ ಕಾರ್ಡ್ ನಲ್ಲಿದ್ದ ಹಣ ಕಡಿತವಾಗುತ್ತದೆ.‌

Edited By : Shivu K
PublicNext

PublicNext

14/01/2022 02:06 pm

Cinque Terre

43.34 K

Cinque Terre

0

ಸಂಬಂಧಿತ ಸುದ್ದಿ