ಬೆಂಗಳೂರು- ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್ ಪ್ರಕರಣನಆರೋಪಿ ರಾಹುಲ್ ಭಟ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ.ಇಂದು ನ್ಯಾಯಾಲಯದ ಮುಂದೆ ಆರೋಪಿಯನ್ನ ಹಾಜರು ಪಡಿಸಲಿರೋ ಸಿಸಿಬಿ ಪೊಲೀಸರು ಮತ್ತೆ ಕಸ್ಟಡಿಗೆ ಕೇಳೋ ಸಾಧ್ಯತೆಯಿದೆ.
ಬ್ಲಾಕ್‌ಮೇಲ್ ಪ್ರಕರಣದಲ್ಲಿ ಜ.8 ನೇ ತಾರೀಕು ರಾಹುಲ್ ಭಟ್ ನನ್ನ ಬಂಧಿಸಿದ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ಸಲುವಾಗಿ 5 ದಿನ ಕಸ್ಟಡಿಗೆ ಪಡೆದಿದ್ರು.ಇಂದಿಗೆ 5 ದಿನದ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ,ಇಂದು ಕೋರ್ಟ್ ಗೆ ಹಾಜರು ಪಡಿಸಿ ಮತ್ತೆ ಕಸ್ಟಡಿಗೆ ಪಡೆಯಲು ಸಿಸಿಬಿ ಪೊಲೀಸರ ಚಿಂತನೆ ನಡೆಸಿದೆ.
ಸಿಸಿಬಿ ವಿಚಾರಣೆ ವೇಳೆ ಸಾಕಷ್ಟು ವಿಚಾರಗಳ ಕುರಿತು ಬಾಯ್ಬಿಡದ ರಾಹುಲ್ ಭಟ್ ವಿಚಾರಣೆ ವೇಳೆ ನನಗೇನೂ ಗೊತ್ತೇ ಇಲ್ಲ ಅಂತಿದ್ದಾನೆ. ಈ ಮತ್ತೆ ಆರೋಪಿಯನ್ನ ಕಸ್ಟಡಿಗೆ ಪಡೆಯಲು ಸಿಸಿಬಿ ತಯಾರಿ ನಡೆಸಿದೆ.
Kshetra Samachara
12/01/2022 09:40 am