ಬೆಂಗಳೂರು : ಕಳ್ಳತನವನ್ನೇ ಫುಲ್ ಟೈಮ್ ಕೆಲಸ ಮಾಡಿಕೊಂಡಿದ್ದ ಮೂರು ಆರೋಪಿಗಳನ್ನು ಬಂಧಿಸುವಲ್ಲಿ ಸಂಜಯ್ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 24 ಗ್ರಾಂ ಚಿನ್ನಾಭರಣ, ಎರಡು ಲ್ಯಾಪ್ ಟಾಪ್, ಎರಡು ಐಫೋನ್ ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ರೌಡಿ ಶೀಟರ್ ಗಳಾಗಿದ್ದು ಹಲವು ಪ್ರಕರಣ ಭಾಗಿದ್ದಾರೆ. ಇತ್ತೀಚಿಗೆ ಕೊಲೆಯತ್ನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಆರೋಪಿಗಳಿಂದ 3.5 ಲಕ್ಷ ಬೆಲೆ ಬಾಳುವ ವಸ್ತುಗಳು ವಶ ಪಡೆಯಲಾಗಿದೆ. ಸಂಜೆಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
25/11/2021 01:33 pm