ಬೆಂಗಳೂರು ಪೂರ್ವ ವಲಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಎರಡು ಲಕ್ಷ ಬೆಲೆಯ ಬೈಕ್ ನ ಪಾರ್ಕ್ ಮಾಡಿದ್ದ ಸ್ಥಳದಿಂದ ಕಳ್ಳನೊಬ್ಬ ಕದ್ದೊಯ್ದಿದ್ದಾನೆ. ಪ್ರೇಮ್ ಕುಮಾರ್ ಎಂಬ ಯುವಕ ಇಂಟರ್ ವ್ಯೂ ಅಟೆಂಡ್ ಮಾಡಲು ಹೋಗಿದ್ದ ವೇಳೆ ರಸ್ತೆ ಬದಿ ಬೈಕ್ ನ ನಿಲ್ಲಿಸಿದ್ದ. ತನ್ನ ಕೆಲಸ ಮುಗಿಸಿ ಬಂದು ನೋಡುವಷ್ಟರಲ್ಲಿ ಬೈಕ್ ಮಾಯ. ಗಾಬರಿಗೊಂಡ ಯುವಕ ಕೂಡಲೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಹೆಣ್ಣೂರು ಬಂಡೆ ವಾಸಿ ಪ್ರೇಮ್ ಕುಮಾರ್ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಯಮಹ ಆರ್-15 ಎಂಬ ಬೈಕ್ನ ಖರೀದಿಸಿದ್ದ. ಅಪ್ಪ ಅಮ್ಮ ತರಕಾರಿ ವ್ಯಾಪಾರ ಮಾಡಿ ಓದುತ್ತಿದ್ದ ಮಗನಿಗೆ ಬೈಕ್ ಕೊಡಿಸಿದ್ದರು. ಓದು ಮುಗಿಸಿದ್ದ ಪ್ರೇಮ್ ಕೆಲಸದ ಹುಡುಕಾಟದಲ್ಲಿದ್ದ. ಇಂತಹ ವೇಳೆ ಸುಮಾರು 30ವರ್ಷ ವಯಸ್ಸು ಆಸುಪಾಸಿನ ಆಸಾಮಿ ಪ್ರೊಫೆಷನಲ್ ಕಳ್ಳನಂತೆ ಬಂದು ಬೈಕ್ನ ಕದ್ದೊಯ್ದಿದ್ದಾನೆ. ಒಂದು ನಿಮಿಷ ಆ ಕಡೆ ಈ ಕಡೆ ನೋಡಿ ಸುತ್ತಾಡಿ, ಯಾರು ಗಮನಿಸುತ್ತಿಲ್ಲ ಅಂತ ಗೊತ್ತಾಗ್ತಿದ್ದಂತೆ ಕದ್ದೊಯ್ದಿದ್ದಾನೆ. ಕಳ್ಳನ ಎಲ್ಲ ಕರಾಮತ್ತು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕನ ದೂರಿನನ್ವಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿ, ಕಳ್ಳನಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
29/08/2022 08:24 pm