ಬೆಂಗಳೂರು: ರಸ್ತೆ ಅಂದ ಮೇಲೆ ಆಕ್ಸಿಡೆಂಟ್, ವಾಗ್ವಾದ ಹೀಗೆ ಸಣ್ಣಪುಟ್ಟ ಕಿರಿಕ್ ಇದ್ದೇ ಇರುತ್ತೆ. ಇದಕ್ಕೆ ವಾದ ಮಾಡಿಕೊಂಡು ಜಗಳ, ಗಲಾಟೆ ಮಾಡಿಕೊಂಡ್ರೆ ತೊಂದರೆಯಾಗೋದು ಪಕ್ಕಾ. ಜಸ್ಟ್ ಬೈಕ್ ಟಚ್ ಆಯ್ತು ಅಂತ ಕಿರಿಕ್ ಮಾಡಿಕೊಂಡು ಕೇವಲ ತಳ್ಳಾಟ- ನೂಕಾಟದಲ್ಲೇ ಬೈಕ್ ಸವಾರ ಕೋಮಾ ಸೇರಿದ್ದಾನೆ!
ಆಗಸ್ಟ್ 30ರ ರಾತ್ರಿ ಎಸ್ ಆರ್ ನಗರ 14ನೇ ಕ್ರಾಸಲ್ಲಿ ಬರ್ತಿದ್ದಾಗ ಮಂಜುನಾಥ್ ಎಂಬಾತನಿಗೆ ಬೈಕ್ ಟಚ್ ಆಗಿತ್ತು. ಇದಕ್ಕೆ ಗರಂ ಆಗಿ ಮಂಜುನಾಥ ಬೈಕ್ ಸವಾರ ಸೂರ್ಯನಿಗೆ ಬೈಕನ್ನು ಸರಿಯಾಗಿ ಓಡ್ಸಪ್ಪ ಎಂದಿದ್ದ. ತಕ್ಷಣ ಬೈಕ್ ನಿಲ್ಲಿಸಿದ ಸೂರ್ಯ, ಮಂಜುನಾಥನ ಕೊರಳ ಪಟ್ಟಿ ಹಿಡಿದು ಜಗಳ ಶುರು ಮಾಡಿದ್ದ.
ಈ ವೇಳೆ ಮಂಜುನಾಥನೂ ಕೂಡ ಸೂರ್ಯನ ಕೊರಳ ಪಟ್ಟಿ ಹಿಡಿದು ಜಗಳ ಮಾಡುವಾಗ ಆಯತಪ್ಪಿ ರಸ್ತೆಗೆ ಬಿದ್ದ ಸೂರ್ಯ ಮತ್ತೆ ಏಳಲೇ ಇಲ್ಲ! ಸೂರ್ಯನ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೀತಿದ್ದಾನೆ. ಮಂಜುನಾಥ ಹಾಗೂ ಸೂರ್ಯನ ಜಗಳದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಎಸ್ ಆರ್ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
02/09/2022 02:26 pm