ಬೆಂಗಳೂರು: ಗಾಂಜಾ ಮತ್ತಿನಲ್ಲಿದ್ದ ಕೆಲ ಕಿಡಿಗೇಡಿಗಳು ಟಿ.ದಾಸರಹಳ್ಳಿಯ ಮಲ್ಲಸಂದ್ರ ವಾರ್ಡ್ 13ರ ಬೃಹತ್ ಕೆಂಪೇಗೌಡ ಉದ್ಯಾನವನದಲ್ಲಿನ ಹಂಪಿ ಥಿಯೇಟರ್ ಕಿಟಕಿಗಳಿಗೆ ಕಲ್ಲು ತೂರಿದ್ದಾರೆ. ಪರಿಣಾಮ ಎರಡು ಕೊಠಡಿಯ ಎಲ್ಲಾ ಕಿಟಕಿ ಗ್ಲಾಸ್‌ಗಳು ತುಂಡುತುಂಡಾಗಿವೆ.
ಬೃಹತ್ ಕೆಂಪೇಗೌಡ ಉದ್ಯಾನವನಕ್ಕೆ ಅತೀ ಹೆಚ್ಚು ಜನ್ರು ಕುಟುಂಬ ಸಹಿತ ವಿಹಾರಕ್ಕೆ ಬರಲಿದ್ದು, ಅವರನ್ನ ಆತಂಕಕ್ಕೀಡು ಮಾಡಿದಂತಾಗಿದೆ. ಹೀಗಾಗಿ ಗಾಂಜಾ ಮತ್ತಿನ ಪುಂಡರನ್ನ ಮಟ್ಟ ಹಾಕುವಂತೆ ಪೊಲೀಸರಿಗೆ ಸ್ಥಳೀಯರ ಮನವಿ ಮಾಡಿದ್ದು, ಪಾರ್ಕ್ ಬಳಿ ಬೀಟ್ ಪೊಲೀಸರನ್ನ ನಿಯೋಜನೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
19/06/2022 03:51 pm