ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿನಿಮಾ ಖಳನಟನಿಂದ ಹಣಕ್ಕಾಗಿ ರಿಯಲ್ ಕಿಡ್ನಾಪ್

ಬೆಂಗಳೂರು:‌ ಕನ್ನಡದ ಹೆಸರಾಂತ ಸಿನಿಮಾದಲ್ಲಿ ಖಳನಾಯಕನ‌ ಪಾತ್ರವನ್ನ ಅಚ್ಚುಕಟ್ಟಾಗಿ ಮಾಡುತ್ತಿದ್ದ ಆತ ನಿಜ‌ ಜೀವನದಲ್ಲೂ ಕೂಡ ಮಹಾಲಕ್ಷ್ಮೀ ಲೇಔಟ್‌ ಠಾಣೆಯ ರೌಡಿ ಶೀಟರ್ ಆಗಿದ್ದ. ಸಿನಿಮಾ ಮಾಡ್ಕೊಂಡು ಆರಾಮವಾಗಿ ಇದ್ದಿದ್ರೆ ಓಕೆ. ಆದ್ರೆ ಅದನ್ನ ಬಿಟ್ಟು ಸಿನಿಮಾ ಸ್ಟೈಲ್ ನಲ್ಲಿ ಇಲ್ಲೂ ವಿಲನ್ ರೀತಿ ಹಣಕ್ಕಾಗಿ ಕಿಡ್ನಾಪ್ ಮಾಡಿ ಜೈಲು ಸೇರಿದ್ದಾನೆ.

ವೀರ ಪರಂಪರೆ, ದುಷ್ಟ ಸಿನಿಮಾ ಸೇರಿದಂತೆ ನಲವತ್ತು ಸಿನಿಮಾದಲ್ಲಿ ನಟಿಸಿದ್ದ ನಾರಾಯಾಣ ಅಂಡ್ ಟೀಂ ಕಿಡ್ನಾಪ್ ಕೇಸ್‌ನಲ್ಲಿ ಜೈಲು ಸೇರಿದ್ದಾರೆ. ಕಳೆದ 20ನೇ ತಾರೀಖು ನಗರದ ಶಿವಾನಂದ ಸರ್ಕಲ್ ಬಳಿ ವಜ್ರದ ವ್ಯಾಪಾರಿಯನ್ನು ಕಿಡ್ನಾಪ್ ಮಾಡಿದ್ರು.‌ ಬಳಿಕ ಎರಡು ಕೋಟಿಗೆ ಡಿಮ್ಯಾಂಡ್ ಇಟ್ಟಿದ್ದ ಆರೋಪಿಗಳು ಕೊನೆಗೆ 25 ಲಕ್ಷ ಹಣ ಪಡೆದು ಆರು ಚೆಕ್‌ಗಳನ್ನು ಪಡೆದಿದ್ರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ ಪೊಲೀಸರು ಸದ್ಯ ನಾರಾಯಣ, ಉಮೇಶ, ಅಶ್ವಥ್, ನೂತನ್‌ನನ್ನು ಬಂಧಿಸಿದ್ದಾರೆ.

ಆರೋಪಿ ಉಮೇಶ್ ಕೊಟ್ಟ ಪ್ಲಾನ್ ಮೇರೆಗೆ ನಾರಾಯಣ ಕಿಡ್ನಾಪ್ ಪ್ಲಾನ್ ಮಾಡಿದ್ದ. ವಜ್ರದ ವ್ಯಾಪಾರಿ ಬಳಿ ಸಾಕಷ್ಟು ಹಣ ಇದೆ ಬೆದರಿಸಿದ್ರೆ ಪಕ್ಕಾ ಹಣ ಸಿಗುತ್ತೆ ಅನ್ನೋ ಪ್ಲಾನ್ ಮಾಡಿದ್ರು. ಪ್ಲಾನ್ ವರ್ಕೌಟ್ ಆದ್ರೂ ಕೊನೆಗೆ ಖಾಕಿ‌ ಕೈಗೆ ಲಾಕ್ ಆದಾಗ ಸಾಲದ ಕತೆ ಕಟ್ಟಿ ತಪ್ಪಿಸಿಕೊಳ್ಳುವ ನಾಟಕ ಆಡಿದ್ರು.‌ ಆದ್ರೆ ತನಿಖೆಯಲ್ಲಿ ಆರೋಪಿಗಳು ಹಣಕ್ಕಾಗಿ ಕಿಡ್ನಾಪ್ ಮಾಡಿರೋದು ಕನ್ಫರ್ಮ್ ಆಗಿದ್ದು, ಅವರಿಂದ 15 ಲಕ್ಷ ರೂ. ಹಾಗೂ ಒಂದು ಕಾರ್ ಸೀಜ್ ಮಾಡಿ ಜೈಲಿಗೆ ಕಳುಹಿಸಲಾಗಿದೆ.

Edited By :
PublicNext

PublicNext

02/06/2022 06:01 pm

Cinque Terre

31.42 K

Cinque Terre

0

ಸಂಬಂಧಿತ ಸುದ್ದಿ